ಉದಯವಾಹಿನಿ, ದಾವಣಗೆರೆ: ಪಿಡಿಒ, ಅಧಿಕಾರಿಗಳು ಕೆಲಸ ಮಾಡಿಸಿ ಬಿಲ್ ಪಾವತಿಸದೇ ಇದ್ದಿದ್ದಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಗಳೂರಲ್ಲಿ ನಡೆದಿದೆ.
ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ. ಜಗಳೂರು ತಾಲೂಕಿನ ಭರಮಸಮುದ್ರದ ಗ್ರಾ .ಪಂ. ಉಪಾಧ್ಯಕ್ಷ ತಿಪ್ಪೇಸ್ವಾಮಿ ಗ್ರಾಮಕ್ಕೆ ಸಾಲಸೋಲ ಮಾಡಿ ಕೆಲಸ ಮಾಡಿಸಿದ್ದರಂತೆ. ಕುಡಿಯುವ ನೀರಿನ ಕೊಳವೆ ಬಾವಿ ಮೋಟರ್ ದುರಸ್ಥಿ ಸೇರಿ ವಿವಿಧ ಅಭಿವೃದ್ದಿ ಕೆಲಸ ಮಾಡಿಸಿದ್ದರು ಎನ್ನಲಾಗಿದೆ. ಆದರೆ ಪಿಡಿಓ ಕೊಟ್ರೇಶ್ ಸೇರಿದಂತೆ ಇತರೆ ಅಧಿಕಾರಿಗಳು ಹಣ ಪಾವತಿ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳ ನಡೆಯಿಂದ ಬೇಸತ್ತ ತಿಪ್ಪೇಸ್ವಾಮಿ ಒಂದು ಲೀಟರ್ ಪೆಟ್ರೋಲ್ ತೆಗೆದುಕೊಂಡು ಜಗಳೂರು ಪಟ್ಟಣ ಪಂಗೆ ಬಂದು ಮೈಮೇಲೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯರು ಕೂಡಲೇ ಅವರ ಮೈಮೇಲೆ ನೀರು ಸುರಿದು ಆಗುತ್ತಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
