ಉದಯವಾಹಿನಿ, ಅರುಣಾಚಲ ಪ್ರದೇಶ: ಭರತ್ ಮಾತಾ ಕಿ ಜೈ ಎನ್ನಲು ಮುಸ್ಲಿಂ ಧರ್ಮ ಗುರುವೊಬ್ಬರು ನಿರಾಕರಿಸಿರುವ ಘಟನೆ ಅರುಣಾಚಲ ಪ್ರದೇಶದ ನಹರ್ಲಗುನ್‌ನ ಜಾಮಾ ಮಸೀದಿಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ನವೆಂಬರ್ 27 ರಂದು ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಬಳಿಕ ಗುರುತು, ವಲಸೆ ಮತ್ತು ರಾಷ್ಟ್ರೀಯತೆಯ ಬಗ್ಗೆ ಉದ್ವಿಗ್ನತೆಯನ್ನು ಉಂಟು ಮಾಡಿದೆ.
ಅರುಣಾಚಲ ಪ್ರದೇಶದ ನಹರ್ಲಗುನ್‌ನ ಜಾಮಾ ಮಸೀದಿಯಲ್ಲಿ ಅರುಣಾಚಲ ಪ್ರದೇಶ ಸ್ಥಳೀಯ ಯುವ ಸಂಘದ ಇಬ್ಬರು ನಾಯಕರು ಮುಸ್ಲಿಂ ಧರ್ಮಗುರುವಿನ ಬಳಿ ದೇಶಭಕ್ತಿಯ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಧರ್ಮಗುರು ನಿರಾಕರಿಸಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ನಿಖಿಲ್ ಕಾಮತ್- ಎಲಾನ್ ಮಸ್ಕ್ ಪಾಡ್‌ಕಾಸ್ಟ್ ಟೀಸರ್; ಬಿಡುಗಡೆಯಾದ ಗಂಟೆಯಲ್ಲೇ ಲಕ್ಷಗಟ್ಟಲೇ ವೀವ್ಸ್
ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಜಾಮಾ ಮಸೀದಿಯೊಳಗೆ ಉಂಟಾದ ಘರ್ಷಣೆಯನ್ನು ಕಾಣಬಹುದು.ನವೆಂಬರ್ 27 ರಂದು ಚಿತ್ರೀಕರಿಸಲಾಗಿರುವ ಈ ವಿಡಿಯೊದಲ್ಲಿ ಯುವ ಸಂಘದ ಇಬ್ಬರು ನಾಯಕರು ಮುಸ್ಲಿಂ ಧರ್ಮ ಗುರುವಿನ ಬಳಿ “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಮಾಡಲು ಹೇಳಿದ್ದು, ಇದನ್ನು ಧರ್ಮಗುರು ನಿರಾಕರಿಸಿದ್ದಾರೆ. ಆಗ ಹೆಚ್ಚಿನ ಜನರು ಒಟ್ಟುಗೂಡಿ ಜೋರಾಗಿ ಘೋಷಣೆ ಕೂಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
