ಉದಯವಾಹಿನಿ, ಗುಹವಾಟಿ: ಚಳಿಗಾಲದ ಅಧಿವೇಶನಕ್ಕೆ ವಿಧಾನಸಭೆಯಿಂದ ಅಮಾನತುಗೊಂಡಿದ್ದ ಅಸ್ಸಾಂ ಕಾಂಗ್ರೆಸ್‌ ಶಾಸಕ ಶೆರ್ಮಿನ್‌ ಅಲಿ ಅಹ್ಮದ್‌ ಅವರನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಕಲಾಪದಲ್ಲಿ ನಡೆಯುತ್ತಿದ್ದ ಚರ್ಚೆಗೆ ಅಡ್ಡಿಪಡಿಸಿದ ಹಿನ್ನೆಲೆ ಅವರನ್ನು ಸದನದಿಂದ ಅಮಾನತುಗೊಳಿಸಲಾಯಿತು ಎನ್ನಲಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಂಡಿದ್ದ ಅಹ್ಮದ್‌ ಸದನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಲು ಎದ್ದುನಿಂತು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಈ ವೇಳೆ ಸ್ಪೀಕರ್ ಬಿಸ್ವಜಿತ್‌ ಡೈಮರಿ, ಶಾಸಕನನ್ನು ಯಾವ ನಿಯಮದಡಿ ನೀವು ಈ ಪ್ರಶ್ನೆಯನ್ನು ಸದನದ ಮುಂದಿಡುತ್ತಿದ್ದೀರಿ ಎಂದು ಮರುಪ್ರಶ್ನಿಸಿದ್ದಾರೆ. ಆದರೆ, ಅಹ್ಮದ್‌ ಸ್ಪೀಕರ್‌ ಅವರ ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ತಮ್ಮ ಮಾತನ್ನು ಮುಂದುವರೆಸಿದ್ದಾರೆ. ಈ ವೇಳೆ ಸದನದಲ್ಲಿ ಕೆಲ ಹೊತ್ತು ಗೊಂದಲದ ವಾತವಾರಣ ಸೃಷ್ಟಿಯಾಗಿದ್ದು, ಇದರಿಂದಾಗಿ ಸ್ಪೀಕರ್‌ ಅವರನ್ನು ಸದನದಿಂದ ಸ್ವಲ್ಪ ಹೊತ್ತು ಅಮಾನತುಗೊಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯ ಉಪಸಭಾಪತಿ ನುಮಾಲ್‌ ಮೋಮಿನ್‌ ಅವರ ವಿರುದ್ಧ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆ ವಿಶೇಷಾಧಿಕಾರ ಸಮಿತಿ ವರದಿಗಳ ಶಿಫಾರಸುಗಳ ಮೇರೆಗೆ ಅಸ್ಸಾಂ ಕಾಂಗ್ರೆಸ್‌ ಶಾಸಕ ಶೆರ್ಮಿನ್‌ ಅಲಿ ಅಹ್ಮದ್‌ ಮತ್ತು ಶಾಸಕ ನೂರುಲ್‌ ಹುಡಾ ಅವರನ್ನು ಸಂಪೂರ್ಣ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು. ಆದರೆ, ಎಲ್ಲಾ ಪಕ್ಷಗಳ ಶಾಸಕರ ಮನವಿಯನ್ನು ಅನುಸರಿಸಿದ ಸಭಾಪತಿ ಡೈಮರಿ ಅವರು ಶುಕ್ರವಾರ ಶಾಸಕರುಗಳ ಅಮಾನತನ್ನು ರದ್ದುಗೊಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಶಾಸಕರು ಸದನದ ನಿಯಮಗಳನ್ನು ಮೀರಿ ವರ್ತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!