ಉದಯವಾಹಿನಿ, ಮಾಸ್ಕೋ, ರಷ್ಯಾ: ಡಿಸೆಂಬರ್ 4 – 5 ರಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್, 23 ನೇ ದ್ವಿಪಕ್ಷೀಯ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಮುನ್ನ ರಷ್ಯಾ ಸಂಸತ್ತಿನ ಕೆಳಮನೆ ಭಾರತದೊಂದಿಗೆ ನಿರ್ಣಾಯಕ ಮಿಲಿಟರಿ ಒಪ್ಪಂದವನ್ನು ಅಂಗೀಕರಿಸಲಿದೆ ಎಂದು ವರದಿಗಳು ತಿಳಿಸಿವೆ.ಫೆಬ್ರವರಿ 18, 2025 ರಂದು ಮಾಸ್ಕೋದಲ್ಲಿ ಭಾರತೀಯ ರಾಯಭಾರಿ ವಿನಯ್ ಕುಮಾರ್ ಮತ್ತು ಹಿಂದಿನ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ಅವರು ಪರಸ್ಪರ ಲಾಜಿಸ್ಟಿಕ್ಸ್ ವಿನಿಮಯ ಒಪ್ಪಂದ (RELOS)ಗೆ ಸಹಿ ಹಾಕಿದ್ದಾರೆ. ಇದು ಎರಡು ರಾಷ್ಟ್ರಗಳ ನಡುವಿನ ಮಿಲಿಟರಿ ಸಹಕಾರವನ್ನು ಹೆಚ್ಚಿಸಲಿದೆ.
ರಷ್ಯಾ ಮತ್ತು ಭಾರತದ ನಡುವಿನ ಸಹಕಾರ ವೃದ್ಧಿಗೆ ಸಹಾಯ: ಸ್ಟೇಟ್ ಡುಮಾ, ರಷ್ಯಾ ಸರ್ಕಾರದ ಟಿಪ್ಪಣಿಯೊಂದಿಗೆ ತನ್ನ ಅನುಮೋದನೆ ಡೇಟಾಬೇಸ್‌ನಲ್ಲಿ RELOS ಅಪ್‌ಲೋಡ್ ಮಾಡಿದೆ. ದಾಖಲೆಯ ಅನುಮೋದನೆಯು ಮಿಲಿಟರಿ ಕ್ಷೇತ್ರದಲ್ಲಿ ರಷ್ಯಾ ಮತ್ತು ಭಾರತದ ನಡುವಿನ ಸಹಕಾರವನ್ನು ಬಲಪಡಿಸುತ್ತದೆ ಎಂದು ರಷ್ಯಾ ಸರ್ಕಾರ ನಂಬುತ್ತದೆ ಎಂದು ಅಧಿಕೃತ ಸುದ್ದಿ ಸಂಸ್ಥೆ TASS ವರದಿ ಮಾಡಿದೆ. RELOS ಒಪ್ಪಂದವು ಜಂಟಿ ಮಿಲಿಟರಿ ಸಮರಾಭ್ಯಾಸ, ವಿಪತ್ತು ಪರಿಹಾರ ಮತ್ತು ಇತರ ಕಾರ್ಯಾಚರಣೆಗಳಿಗೆ ಸಮನ್ವಯ ಸುಗಮಗೊಳಿಸುವ ಗುರಿ ಹೊಂದಿದೆ. ಸ್ಥಳೀಯ ರಕ್ಷಣಾ ಮೂಲಗಳ ಪ್ರಕಾರ, RELOS ಅಭ್ಯಾಸಗಳು ಮತ್ತು ವಿಪತ್ತು ಪರಿಹಾರ ಸೇರಿದಂತೆ ಜಂಟಿ ಚಟುವಟಿಕೆಗಳಿಗೆ ಕಾರ್ಯವಿಧಾನಗಳನ್ನು ಸರಳಗೊಳಿಸುವ ಮೂಲಕ ಮಿಲಿಟರಿ ಸಹಕಾರವನ್ನು ಇದು ಹೆಚ್ಚಿಸುತ್ತದೆ. ಈ ರೀತಿಯ ಒಪ್ಪಂದಗಳು, ಎರಡೂ ಕಡೆ ಶಾಂತಿಕಾಲದ ಕಾರ್ಯಾಚರಣೆಗಳಿಗೆ ಭೌಗೋಳಿಕ ಅವಕಾಶಗಳನ್ನು ವಿಸ್ತರಿಸುತ್ತವೆ. ಈ ಒಪ್ಪಂದದ ನಿಬಂಧನೆಗಳು ಆರ್ಕ್ಟಿಕ್‌ನಲ್ಲಿ ಜಂಟಿ ಕವಾಯತುಗಳಿಗೆ ಅನ್ವಯವಾಗುವ ಸಾಧ್ಯತೆಯಿದೆ. ಏಕೆಂದರೆ ಭಾರತವು ಯಮಲ್ ಪರ್ಯಾಯ ದ್ವೀಪದಿಂದ ರವಾನಿಸುತ್ತದೆ ಎಂದು ಇಜ್ವೆಸ್ಟಿಯಾ ದಿನಪತ್ರಿಕೆ ವರದಿ ಮಾಡಿದೆ.
ಭಾರತೀಯ ನೌಕಾಪಡೆಯ ತಲ್ವಾರ್ ವರ್ಗದ ಯುದ್ಧನೌಕೆಗಳು ಮತ್ತು INS ವಿಕ್ರಮಾದಿತ್ಯ ವಿಮಾನವಾಹಕ ನೌಕೆಯು ಆರ್ಕ್ಟಿಕ್‌ನ ಘನೀಕರಿಸುವ ವಾತಾವರಣದಲ್ಲಿ ಪ್ರಯಾಣಿಸಲು ಸಜ್ಜಾಗಿದ್ದು, ಲಾಜಿಸ್ಟಿಕ್ ಬೆಂಬಲಕ್ಕಾಗಿ ರಷ್ಯಾದ ನೌಕಾ ನೆಲೆಗಳನ್ನು ಬಳಸಬಹುದು.ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನೀ ಮತ್ತು ಇತರ ಹೊರಗಿನ ದೇಶಗಳ ಉಪಸ್ಥಿತಿಯನ್ನು ಸರಿದೂಗಿಸಲು ರಷ್ಯಾದ ನೌಕಾಪಡೆಯು ಭಾರತೀಯ ಸೌಲಭ್ಯಗಳನ್ನು ಬಳಸಬಹುದು ಎಂದು ಇಲ್ಲಿನ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
