ಉದಯವಾಹಿನಿ, ವಾಷಿಂಗ್ಟನ್, ಅಮೆರಿಕ: ಶ್ವೇತಭವನ ಬಳಿ ಇಬ್ಬರು ರಾಷ್ಟ್ರೀಯ ಗಾರ್ಡ್​ ಸೈನಿಕರ ಮೇಲೆ ಗುಂಡು ಹಾರಿಸಿ ಕೊಂದ ಆರೋಪದ ಮೇಲೆ ಅಫ್ಘಾನ್ ಪ್ರಜೆಯೊಬ್ಬರ ಮೇಲೆ ಪ್ರಥಮ ದರ್ಜೆ ಕೊಲೆ ಹಾಗೂ ಎರಡು ಬಾರಿ ಶಸ್ತ್ರಸಜ್ಜಿತವಾಗಿ ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿದ ಆರೋಪ ಹೊರಿಸಲಾಗುವುದು ಎಂದು ಕೊಲಂಬಿಯಾ ಜಿಲ್ಲೆಯ ಅಮೆರಿಕದ ವಕೀಲರು ಶುಕ್ರವಾರ ಘೋಷಿಸಿದ್ದಾರೆ.
ಶ್ವೇತಭವನದ ಬಳಿ ಬುಧವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯ ನಂತರ ತಜ್ಞೆ ಸಾರಾ ಬೆಕ್‌ಸ್ಟ್ರೋಮ್ (20) ಮತ್ತು ಸ್ಟಾಫ್ ಸಾರ್ಜೆಂಟ್ ಆಂಡ್ರ್ಯೂ ವೋಲ್ಫ್ (24) ಅವರನ್ನು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಸಂಜೆ ಬೆಕ್‌ಸ್ಟ್ರೋಮ್ ನಿಧನರಾಗಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.ಈ ಗುಂಡಿನ ದಾಳಿ ಪ್ರಕರಣದಲ್ಲಿ ಶಂಕಿತನಾಗಿದ್ದ ಅಫ್ಘಾನಿಸ್ತಾನ ಯುದ್ಧದ ಸಮಯದಲ್ಲಿ ಸಿಐಎ ಜೊತೆ ಕೆಲಸ ಮಾಡಿದ್ದ 29 ವರ್ಷದ ಆಫ್ಘನ್ ಪ್ರಜೆ ರಹಮಾನುಲ್ಲಾ ಲಕನ್ವಾಲ್ ವಿರುದ್ಧ ಇದೀಗ ಪ್ರಥಮ ದರ್ಜೆ ಕೊಲೆ ಆರೋಪ ಹೊರಿಸಲಾಗಿದೆ. ಹಾಗೇ ಶಸ್ತ್ರಸಜ್ಜಿತವಾಗಿ ಕೊಲ್ಲುವ ಉದ್ದೇಶದಿಂದ ಎರಡು ಹಲ್ಲೆಗಳನ್ನು ಮಾಡಲಾಗಿದೆ ಎಂಬ ಆರೋಪಗಳನ್ನು ಹೊರಿಸಲಾಗಿದೆ ಎಂದು ಯುಎಸ್ ಅಟಾರ್ನಿ ಜೀನೈನ್ ಪಿರೋ ತಿಳಿಸಿದ್ದಾರೆ. ನಿರಾಶ್ರಿತರ ಆಶ್ರಯಕ್ಕೆ ವಿರಾಮ: ಗುಂಡಿನ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಟ್ರಂಪ್​ ಕರೆದಿದ್ದು, ಅಫ್ಘಾನಿಸ್ತಾನ ಯುದ್ಧದ ಸಮಯದಲ್ಲಿ ಅಮೆರಿಕದ ಪಡೆಗಳೊಂದಿಗೆ ಕೆಲಸ ಮಾಡಿದ್ದ ಆಫ್ಘನ್ನರು ಅಮೆರಿಕಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದಕ್ಕಾಗಿ ಬೈಡನ್​ ಆಡಳಿತದ ವಿರುದ್ಧ ಹರಿಹಾಯ್ದರು. ಬಡ ರಾಷ್ಟ್ರಗಳಿಂದ ವಲಸೆಯನ್ನು ಶಾಶ್ವತವಾಗಿ ನಿಲ್ಲಿಸಲು ಮತ್ತು ದೇಶದಿಂದ ಲಕ್ಷಾಂತರ ವಲಸಿಗರನ್ನು ಹೊರಹಾಕುವ ಉದ್ದೇಶ ಹೊಂದಿದ್ದು, ಆಫ್ಘನ್ ಪಾಸ್‌ಪೋರ್ಟ್‌ಗಳಲ್ಲಿ ಪ್ರಯಾಣಿಸುವ ಜನರಿಗೆ ವೀಸಾ ಹಾಗೂ ಆಶ್ರಯವನ್ನು ನಿಲ್ಲಿಸುತ್ತಿದೆ ಎಂದು ಘೋಷಿಸಿರುವ ಅವರು, ಅಮೆರಿಕದಲ್ಲಿ ಕೆಲವರು ಸೇರಿದಂತೆ ವಲಸಿಗರ ಬಂಧನವನ್ನು ಕಾನೂನುಬದ್ಧವಾಗಿ ಹೆಚ್ಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!