ಉದಯವಾಹಿನಿ, ಬೇಕಾಗುವ ಪದಾರ್ಥಗಳು… ತೆಂಗಿನ ತುರಿ- 1 ಬಟ್ಟಲು
ಬೆಳ್ಳುಳ್ಳಿ- 8-9 ಹಸಿಮೆಣಸಿನ ಕಾಯಿ- 3-4 ಶುಂಠಿ- ಸ್ವಲ್ಪ, ಕರಿಬೇವು-ಸ್ವಲ್ಪ, ಎಣ್ಣೆ- ಸ್ವಲ್ಪ, ಪಲಾವ್’ಗೆ ಬೇಕಾಗುವ ಸಾಮಾಗ್ರಿ- ಸ್ವಲ್ಪ
ಈರುಳ್ಳಿ- 1 ಬಟಾಣಿ- 1 ಬಟ್ಟಲು, ಟೊಮೆಟೋ- 1, ಮೆಂತ್ಯೆ ಸೊಪ್ಪು- 1 ಬಟ್ಟಲು, ಕೊತ್ತಂಬರಿ ಸೊಪ್ಪ- ಅರ್ಧ ಬಟ್ಟಲುಉಪ್ಪು ರುಚಿಗೆ ತಕ್ಕಷ್ಟುಅಕ್ಕಿ- 1 ಬಟ್ಟಲು,
ಮಾಡುವ ವಿಧಾನ…ಮೊದಲಿಗೆ ಮಿಕ್ಸಿ ಜಾರ್’ಗೆ ತೆಂಗಿನ ತುರಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ ಹಾಗೂ ಕರಿಬೇವು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಪಲಾವ್ ಸಾಮಾಗ್ರಿಗಳು, ಈರುಳ್ಳಿ, ಟೊಮೆಯೋ ಹಾಕಿ ಕೆಂಪಗೆ ಹುರಿದುಕೊಳ್ಳಿ.ಬಳಿಕ ಬಟಾಣಿ, ಸಣ್ಣಗೆ ಕತ್ತರಿಸಿದ ಮೆಂತ್ಯೆ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2-3 ನಿಮಿಷ ಕೈಯಾಡಿಸಿ,ನಂತರ ಅಕ್ಕಿಯನ್ನು ಅಳತೆ ಮಾಡಿಕೊಂಡ ಬಟ್ಟಲಿನಲ್ಲೇ ಒಂದು ಬಟ್ಟಲು ಅಕ್ಕಿಗೆ 2 ಬಟ್ಟಲು ನೀರು ಹಾಕಿ, ನೀರು ಕುದಿಯಲು ಬಿಡಿ. ನಂತರ ಅಕ್ಕಿಯನ್ನು ಹಾಕಿ ಮುಚ್ಚಳ ಮುಚ್ಚಿ, 2 ಕೂಗು ಕೂಗಿಸಿಕೊಂಡರೆ, ರುಚಿಕರವಾದ ಮೆಂತ್ಯೆ ಸೊಪ್ಪಿನ ಬಾತ್ ಸವಿಯಲು ಸಿದ್ಧ.
