ಉದಯವಾಹಿನಿ, ಮಾಸ್ಕೋ: ಉಕ್ರೇನ್‌ನ ಮಾನವರಹಿತ ಕಡಲ ಡ್ರೋನ್‌ಗಳು ವಿರಾಟ್ ಎಂಬ ಹೆಸರಿನ ರಷ್ಯಾದ ತೈಲ ಟ್ಯಾಂಕರ್ ಮೇಲೆ ಕಪ್ಪು ಸಮುದ್ರದಲ್ಲಿ ದಾಳಿ ನಡೆಸಿವೆ. ದಾಳಿ ಬೆನ್ನಲ್ಲೇ ಸಿಬ್ಬಂದಿಯಿಂದ ಕರೆ ಬಂದಿತು. ‘ಇದು VIRAT. ಸಹಾಯ ಬೇಕು! ಡ್ರೋನ್ ದಾಳಿ! ಮೇಡೇ!’ ಎಂದು ಕರೆ ಬಂತು. ಶುಕ್ರವಾರ ತಡರಾತ್ರಿ ಅದೇ ಹಡಗಿನಲ್ಲಿ ನಡೆದ ಸ್ಫೋಟದ ನಂತರ ಈ ಘಟನೆ ಸಂಭವಿಸಿದೆ.ಟರ್ಕಿಯ ಸಾರಿಗೆ ಸಚಿವಾಲಯವು ಟ್ಯಾಂಕರ್ ಮೇಲೆ ಮಾನವರಹಿತ ಸಮುದ್ರ ವಾಹನಗಳು ಎರಡು ಬಾರಿ ದಾಳಿ ನಡೆಸಿವೆ ಎಂದು ದೃಢಪಡಿಸಿತು. ಆದರೆ ಅಧಿಕಾರಿಗಳು ಹಡಗಿಗೆ ಗಣಿ, ರಾಕೆಟ್ ಅಥವಾ ನೀರೊಳಗಿನ ಡ್ರೋನ್ ಡಿಕ್ಕಿ ಹೊಡೆದಿರಬಹುದು ಎಂದು ತಿಳಿಸಿದ್ದಾರೆ. ಹಾನಿಯಾಗಿದ್ದರೂ, ಟ್ಯಾಂಕರ್ ಸ್ಥಿರವಾಗಿದೆ. ಅದರ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಉಕ್ರೇನ್‌ನ ಭದ್ರತಾ ಸೇವೆ (SBU) ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಉಕ್ರೇನಿಯನ್ ನೌಕಾಪಡೆಯೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಆಧುನೀಕರಿಸಿದ “ಸೀ ಬೇಬಿ” ನೌಕಾ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!