ಉದಯವಾಹಿನಿ, ಲೆಬನಾನ್​: ಇರಾನ್​ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ನಾಯಕ ಇಸ್ರೇಲ್​ಗೆ ವಾರ್ನಿಂಗ್​ ಕೊಟ್ಟಿದ್ದಾರೆ. ತನ್ನ ಉನ್ನತ ಮಿಲಿಟರಿ ಕಮಾಂಡರ್ ಹತ್ಯೆ ಮಾಡಿರುವ ಇಸ್ರೇಲ್​ ವಿರುದ್ಧ ಸೇಡು ತೀರಿಸಿಕೊಳ್ಳುವ ಹಕ್ಕು ನಮಗಿದೆ ಎಂದು ಹಿಜ್ಬುಲ್ಲಾ ಸಂಘಟನೆಯ ನಾಯಕ ನಯೀಮ್​ ಖಾಸಿಮ್​ ಎಚ್ಚರಿಸಿದ್ದಾರೆ. ಈ ಮೂಲಕ ಇಸ್ರೇಲ್​ ಮತ್ತು ಹಿಜ್ಬುಲ್ಲಾ ಸಂಘಟನೆಯ ನಡುವೆ ಮತ್ತೆ ಯುದ್ಧ ಶುರುವಾಗುವ ಭೀತಿ ಮಧ್ಯಪ್ರಾಚ್ಯದಲ್ಲಿ ಶುರುವಾಗಿದೆ.
ಉನ್ನತ ಮಿಲಿಟರಿ ಕಮಾಂಡರ್ ಹತ್ಯೆ ಮಾಡಿರುವ ಇಸ್ರೇಲ್​ ವಿರುದ್ಧ ಸೇಡು ತೀರಿಸಿಕೊಳ್ಳುವ ಹಕ್ಕು ನಮಗಿದೆ ಎಂದು ಹಿಜ್ಬುಲ್ಲಾ ಸಂಘಟನೆಯ ನಾಯಕ ನಯೀಮ್​ ಖಾಸಿಮ್​ ಎಚ್ಚರಿಸಿದ್ದಾರೆ. ಈ ಮೂಲಕ ಇಸ್ರೇಲ್​ ಮತ್ತು ಹಿಜ್ಬುಲ್ಲಾ ಸಂಘಟನೆಯ ನಡುವೆ ಮತ್ತೆ ಯುದ್ಧ (War) ಶುರುವಾಗುವ ಭೀತಿ ಮಧ್ಯಪ್ರಾಚ್ಯದಲ್ಲಿ ಶುರುವಾಗಿದೆ.
ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧಕ್ಕೆ ಕದನ ವಿರಾಮ ಘೋಷಿಸಿದ್ದರು ಇಸ್ರೇಲ್​ ಸೇನೆ ಕಳೆದ ನವೆಂಬರ್​ 23ರಂದು ಬೈರುತ್​​ ನಗರದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಮಿಲಿಟರಿ ಮುಖ್ಯಸ್ಥ ಹೈಥಮ್​​ ಅಲಿ ತಬ್ತಬಾತಿ ಸಾವನ್ನಪ್ಪಿದ್ದನು. ಕಳೆದ ಜೂನ್​ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್​ ದಾಳಿ ಮಾಡಿತ್ತು. ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ನಡೆದ ಈ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿತ್ತು.

Leave a Reply

Your email address will not be published. Required fields are marked *

error: Content is protected !!