ಉದಯವಾಹಿನಿ, ಬೆಂಗಳೂರು: ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳು ಕೈಗೊಳ್ಳಲಾದ ನಿರ್ಮಾಣ ಕಾಮಗಾರಿಗಳ ಮಟ್ಟವನ್ನು ೫೦ ಲಕ್ಷ ರೂ.ನಿಂದ ೧ ಕೋಟಿ ರೂ.ಗೆ ರೂ.ಹೆಚ್ಚಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ (ತಿದ್ದುಪಡಿ) ವಿಧೇಯಕ-೨೦೨೩ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.
ಶುಕ್ರವಾರ ವಿಧಾನಸಭೆಯಲ್ಲಿ ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಹಲವು ಸದಸ್ಯರು ಸದನದಲ್ಲಿ ಧ್ವನಿ ಮತದ ಅಂಗೀಕಾರ ದೊರೆಯಿತು.  ಇದಕ್ಕೂ ಮೊದಲು ವಿಧೇಯಕ ಕುರಿತು ಪ್ರಸ್ತಾಪಿಸಿದ ಎಚ್.ಕೆ.ಪಾಟೀಲ್, ಎಸ್ಆರ್ ದರ ಗಮನದಲ್ಲಿಟ್ಟುಕೊಂಡು ತಿದ್ದುಪಡಿ ತರಲಾಗಿದೆ. ಶೇ.೬೨ರಷ್ಟು ಮೊದಲ ಟೆಂಡರ್ ನಲ್ಲಿ, ಶೇ.೮೨ರಷ್ಟು ಟೆಂಡರ್ ನಲ್ಲಿ ಎಸ್ಸಿ,ಎಸ್ಟಿ ಸಮುದಾಯದವರು ಭಾಗವಹಿಸಿದ್ದಾರೆ. ಇದು ಸಾಮಾಜಿಕ ನ್ಯಾಯ ಒದಗಿಸಲು ದೊಡ್ಡ ಅಸ್ತ್ರವಾಗಿದ್ದು, ಒಪ್ಪಿಗೆ ಸೂಚಿಸುವಂತೆ ಕೋರಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಮ್ಮ ಪಕ್ಷದ ನಿಲುವು ಕೂಡ ತಿದ್ದುಪಡಿ ತರುವುದೇ ಆಗಿತ್ತು. ಆ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಂತಾಗುತ್ತದೆ. ಶಿಕ್ಷಣ, ಉದ್ಯೋಗ ಸಬಲೀಕರಣದಲ್ಲಿ ಆ ಸಮುದಾಯಕ್ಕೆ ಆದ್ಯತೆ ಸಿಗಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!