ಉದಯವಾಹಿನಿ, ನವದೆಹಲಿ: ಈ ಬಾರಿಯ ನವೆಂಬರ್‌ನಲ್ಲಿ 1.7 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ( ಸಂಗ್ರಹವಾಗಿದೆ ಎಂದು ಕೇಂದ್ರೀಯ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 1,69,016 ಕೋಟಿ ರೂ. ಸಂಗ್ರಹವಾಗಿದ್ದರೆ ಈ ಬಾರಿ 1,70,276 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ದರೆ ಈ ಬಾರಿ 0.7% ಬೆಳವಣಿಗೆ ಸಾಧಿಸಿದೆ. ಆದರೆ ಈ ಅಕ್ಟೋಬರ್‌ಗೆ ಹೋಲಿಸಿದ್ದರೆ ಬಹಳ ಕಡಿಮೆ ಜಿಎಸ್‌ಟಿ ಸಂಗ್ರಹವಾಗಿದೆ. ಅಕ್ಟೋಬರ್‌ನಲ್ಲಿ 1.96 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಜಿಎಸ್‌ಟಿ ಸಂಗ್ರಹದಲ್ಲಿ ನವೆಂಬರ್ ತಿಂಗಳಿನಲ್ಲಿ ಕಡಿಮೆ ಸಂಗ್ರಹವಾಗಿದೆ.
