ಉದಯವಾಹಿನಿ, ಹೈದರಾಬಾದ್: ಇಲ್ಲಿನ ಜೀಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನರ್ಸರಿಯಲ್ಲಿ ಆಯಾ(ದಾದಿ ಒಬ್ಬರು ಪುಟ್ಟ ಮಗುವಿಗೆ ಥಳಿಸುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಅಲ್ಲಿನ ಪೂರ್ಣಿಮಾ ಶಾಲೆಯಲ್ಲಿ 4 ವರ್ಷದ ನರ್ಸರಿ ಮಗುವಿಗೆ ಮಹಿಳಾ ಕೇರ್‌ಟೇಕರ್ ಒಬ್ಬರು ತೀವ್ರವಾಗಿ ಥಳಿಸಿದ್ದಾರೆ. ಆಯಾ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಯಾ ತೀವ್ರವಾಗಿ ಥಳಿಸಿದ್ದರಿಂದ ಮಗು ಹೆದರಿಕೊಂಡಿದ್ದು, ಜ್ವರದಿಂದ ಬಳಲುತ್ತಿತ್ತು. ಇದೀಗ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗ್ತಿದೆ.
ಪಕ್ಕದ ಕಟ್ಟಡದಲ್ಲಿ ವಾಸಿಸುವ ಹುಡುಗನೊಬ್ಬ ಮಗುವಿಗೆ ಥಳಿಸುವ ವಿಡಿಯೋವನ್ನು ತನ್ನ ಫೋನ್‌ನಲ್ಲಿ ಸೆರೆಹಿಡಿದಿದ್ದಾನೆ. ಆ ಹುಡುಗ ವಿಡಿಯೋ ಪೊಲೀಸರಿಗೆ ತೋರಿಸಿದ ಬಳಿಕ ದೂರು ದಾಖಲಾಗಿದೆ. ಕೇರ್‌ಟೇಕರ್ ಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ಕೇರ್‌ಟೇಕರ್ ಉದ್ದೇಶಪೂರ್ವಕವಾಗಿ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹುಡುಗಿಯ ಪೋಷಕರು ಆರೋಪಿಸಿದ್ದಾರೆ.
