ಉದಯವಾಹಿನಿ, ನಮ್ಮ ದೇಹಕ್ಕೆ ಪ್ರೋಟೀನ್ ಮತ್ತು ವಿಟಮಿನ್ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಒಮೆಗಾ-3 ಫ್ಯಾಟಿ ಆಸಿಡ್ಸ್ . ಇದು ನಮ್ಮ ಹಾರ್ಟ್ ಬೀಟ್ ಕರೆಕ್ಟ್ ಆಗಿ ಇಡೋಕೆ, ಬ್ರೈನ್ ಶಾರ್ಪ್ ಆಗಿ ಕೆಲಸ ಮಾಡೋಕೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ತುಂಬಾನೇ ಅವಶ್ಯಕ. ಆದ್ರೆ ಇಲ್ಲಿರೋ ದೊಡ್ಡ ಪ್ರಾಬ್ಲಮ್ ಏನಂದ್ರೆ, ನಮ್ಮ ಬಾಡಿ (Body) ತಾನಾಗಿಯೇ ಈ ಒಮೆಗಾ-3 ಅಂಶವನ್ನು ಉತ್ಪತ್ತಿ ಮಾಡಲ್ಲ. ನಾವು ತಿನ್ನೋ ಊಟದ (Food) ಮೂಲಕವೇ ಇದನ್ನ ಪಡ್ಕೋಬೇಕು. ಇಲ್ಲಾಂದ್ರೆ ಸಮಸ್ಯೆ ಗ್ಯಾರಂಟಿ.
ಮೀನು ತಿನ್ನೋರಿಗೆ ಓಕೆ, ವೆಜಿಟೇರಿಯನ್ಸ್ ಕಥೆ ಏನು?
ಬಹಳಷ್ಟು ಜನರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಮೀನು ತಿನ್ನೋರಿಗೆ ಇದು ಈಸಿಯಾಗಿ ಸಿಗುತ್ತೆ, ಆದ್ರೆ ಸಸ್ಯಾಹಾರಿಗಳಿಗೆ ಒಮೆಗಾ-3 ಸಿಗೋದು ಕಷ್ಟ ಅನ್ನೋ ತಪ್ಪು ಕಲ್ಪನೆ ಇದೆ. ಟೆನ್ಷನ್ ಮಾಡ್ಕೋಬೇಡಿ, ಮೀನು ತಿನ್ನದೇ ಕೂಡ ನೀವು ಒಮೆಗಾ-3 ಪಡ್ಕೋಬಹುದು. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ನೋಡಿ 6 ಸೂಪರ್ ದಾರಿಗಳು.
ಸಾಲ್ಮನ್ ಮೀನು: ನಾನ್‌ವೆಜ್ ಪ್ರಿಯರಿಗೆ ಬೆಸ್ಟ್ ನೀವೇನಾದ್ರೂ ಮೀನು ತಿನ್ನೋರಾಗಿದ್ರೆ, ಸಾಲ್ಮನ್ ಮೀನು ಬೆಸ್ಟ್ ಚಾಯ್ಸ್. ಇದ್ರಲ್ಲಿ ಒಮೆಗಾ-3 ಜೊತೆಗೆ ವಿಟಮಿನ್ ಡಿ ಮತ್ತೆ ಪ್ರೋಟೀನ್ ಕೂಡ ಇರುತ್ತೆ. ವಾರಕ್ಕೆರಡು ಸಲ ಇದನ್ನ ತಿಂದ್ರೆ ಬಿಪಿ ಕಂಟ್ರೋಲ್ ಆಗುತ್ತೆ ಮತ್ತೆ ಹಾರ್ಟ್ ಪ್ರಾಬ್ಲಮ್ಸ್ ಹತ್ತಿರ ಕೂಡ ಬರಲ್ಲ ಅಂತ ಸ್ಟಡಿಗಳು ಹೇಳುತ್ತವೆ. ಸಲಾಡ್ ಅಥವಾ ಸ್ಯಾಂಡ್‌ವಿಚ್ ಜೊತೆ ಇದನ್ನ ಸೇರಿಸ್ಕೊಂಡು ತಿನ್ನಬಹುದು.
ಸ್ಪೆಷಲ್ ಮೊಟ್ಟೆಗಳು: ಈಗ ಮಾರ್ಕೆಟ್‌ನಲ್ಲಿ ಒಮೆಗಾ-3 ಇರೋ ಸ್ಪೆಷಲ್ ಮೊಟ್ಟೆಗಳು ಸಿಗ್ತಿದೆ. ಕೋಳಿಗಳಿಗೆ ಅಗಸೆ ಬೀಜ ಅಥವಾ ಪಾಚಿ ತಿನ್ನಿಸಿ ಇವನ್ನ ಬೆಳೆಸಿರ್ತಾರೆ. ಒಂದೇ ಒಂದು ಮೊಟ್ಟೆಯಲ್ಲಿ ಬರೋಬ್ಬರಿ 150 ಮಿಗ್ರಾಂ ನಷ್ಟು ಒಮೆಗಾ-3 ಇರುತ್ತೆ. ಇದು ನಿಮ್ಮ ನೆನಪಿನ ಶಕ್ತಿ ಹೆಚ್ಚಿಸೋಕೆ ಮತ್ತೆ ಕೆಟ್ಟ ಕೊಲೆಸ್ಟ್ರಾಲ್ ಇಳಿಸೋಕೆ
ರಾಮಬಾಣ.
ಅಗಸೆ ಬೀಜ: ಸಸ್ಯಾಹಾರಿಗಳಿಗೆ ವರದಾನ ಮೀನು ಮುಟ್ಟದವರಿಗೆ ಅಗಸೆ ಬೀಜ (Flax Seeds) ಸೂಪರ್ ಆಪ್ಷನ್. ಇದ್ರಲ್ಲಿ ಒಮೆಗಾ-3 ಭರ್ಜರಿಯಾಗಿರುತ್ತೆ. ದಿನಕ್ಕೆ ಒಂದು ಚಮಚ ಅಗಸೆ ಬೀಜದ ಪುಡಿನ ದೋಸೆ ಅಥವಾ ಚಪಾತಿ ಹಿಟ್ಟಿಗೆ ಹಾಕಿ ತಿನ್ನಿ. ಇಲ್ಲಾಂದ್ರೆ ಸ್ಮೂಥಿಗೆ ಹಾಕೊಂಡು ಕುಡಿರಿ. ಇದು ಜೀರ್ಣಕ್ರಿಯೆಗೂ ಒಳ್ಳೇದು, ಹೃದಯಕ್ಕೂ ಒಳ್ಳೇದು.
ಸಾರ್ಡಿನ್ ಮತ್ತು ಸ್ಮೋಕ್ಡ್ ಸಾಲ್ಮನ್ ಸಾರ್ಡಿನ್ ನೋಡೋಕೆ ಚಿಕ್ಕ ಮೀನಾದ್ರೂ ಸಿಕ್ಕಾಪಟ್ಟೆ ಪವರ್‌ಫುಲ್. ಇದ್ರಲ್ಲಿ ಕ್ಯಾಲ್ಸಿಯಂ ಇರೋದ್ರಿಂದ ಮೂಳೆ ಗಟ್ಟಿ ಆಗುತ್ತೆ. ಇನ್ನು ಸ್ಮೋಕ್ಡ್ ಸಾಲ್ಮನ್ ಕೂಡ ರಕ್ತನಾಳಗಳ ಆರೋಗ್ಯಕ್ಕೆ ಒಳ್ಳೇದು. ಬ್ರೆಡ್ ಟೋಸ್ಟ್ ಜೊತೆ ಅವಕಾಡೊ ಮತ್ತು ಈ ಮೀನು ಇಟ್ಟುಕೊಂಡು ತಿಂದ್ರೆ ರುಚಿಗೆ ರುಚಿ, ಆರೋಗ್ಯಕ್ಕೆ ಆರೋಗ್ಯ.
