ಉದಯವಾಹಿನಿ, ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಮೂಲಂಗಿ ಹೆಚ್ಚಾಗಿ ಸಿಗುತ್ತದೆ. ಈ ಸೀಸನ್​ನಲ್ಲಿ ಮೂಲಂಗಿ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮೂಲಂಗಿಯನ್ನು ನಾನಾ ಭಕ್ಷ್ಯಗಳ ತಯಾರಿಕೆ ಬಳಸಲಾಗುತ್ತದೆ. ಅದರಲ್ಲೂ ಇದರಿಂದ ತಯಾರಿಸಲಾಗುವ ಪರಾಠ ಸಖತ್ ಟೇಸ್ಟಿ ಆಗಿರುತ್ತದೆ. ಕೆಲ ಮಂದಿ ಮೂಲಂಗಿಯನ್ನು ಸಲಾಡ್ ರೂಪದಲ್ಲಿ ಸಹ ಸೇವಿಸುತ್ತಾರೆ. ಮತ್ತೆ ಕೆಲವರು ವಿವಿಧ ತರಕಾರಿಗಳಿಗೆ ಮೂಲಂಗಿಯನ್ನು ಸೇರಿಸಲು ಇಷ್ಟಪಡುತ್ತಾರೆ. ಮೂಲಂಗಿಯು ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮೂಲಂಗಿ ಫೈಬರ್, ಫೋಲೇಟ್, ವಿಟಮಿನ್ ಸಿ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.

ಮೂಲಂಗಿಯಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಫೈಬರ್ ಸರಿಯಾದ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಆದರೆ, ಮೂಲಂಗಿ ತಿನ್ನುವಾಗ ಕೆಲವು ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು. ಏಕೆಂದರೆ ಅರಿಯದೇ ಕೆಲ ಮಂದಿ ಮೂಲಂಗಿ ತಿಂದ ನಂತರ ಹಾಲನ್ನು ಕುಡಿಯುತ್ತಾರೆ. ಆದರೆ, ಇದು ನೀವು ಮಾಡುತ್ತಿರುವ ದೊಡ್ಡ ತಪ್ಪು. ಸದ್ಯ ನಾವಿಂದು ಮೂಲಂಗಿಯೊಂದಿಗೆ ತೆಗೆದುಕೊಳ್ಳಬಾರದ ಕೆಲವು ಆಹಾರಗಳು ಮತ್ತು ಅವುಗಳಿಂದಾಗುವ ಅಡ್ಡಪರಿಣಾಮಗಳೇನು ಎಂಬುವುದರ ಬಗ್ಗೆ ತಿಳಿಯೋಣ ಬನ್ನಿ. ಆಯುರ್ವೇದದ ಪ್ರಕಾರ, ಕೆಲವು ಆಹಾರಗಳೊಂದಿಗೆ ಮೂಲಂಗಿಯನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಅನೇಕ ಮಂದಿ ಹಾಗಲಕಾಯಿಯೊಂದಿಗೆ ಮೂಲಂಗಿಯನ್ನು ಬೆರೆಸಿ ತಿನ್ನುತ್ತಾರೆ. ಆದರೆ, ಮೂಲಂಗಿಯನ್ನು ಹಾಗಲಕಾಯಿಯೊಂದಿಗೆ ಸಂಯೋಜಿಸುವುದು ಒಳ್ಳೆಯದಲ್ಲ. ಈ ಎರಡೂ ಆಹಾರಗಳಲ್ಲಿನ ನೈಸರ್ಗಿಕ ಸಂಯುಕ್ತಗಳು ದೇಹದಲ್ಲಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ, ಇದು ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಮೂಲಂಗಿ ಮತ್ತು ಹಾಲಿನ ಸಂಯೋಜನೆ!
ರಾತ್ರಿ ಹೊತ್ತು ಮೂಲಂಗಿ ತಿನ್ನುವುದನ್ನು ತಪ್ಪಿಸಿ. ನೀವು ಹಗಲಿನಲ್ಲಿ ಸಲಾಡ್‌ನಲ್ಲಿ ಮೂಲಂಗಿಯನ್ನು ಸೇವಿಸಿದರೆ, ಅದನ್ನು ತಿಂದ ನಂತರ ಒಂದು ಗಂಟೆಯವರೆಗೂ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಿ. ಮೂಲಂಗಿ ಬೆಚ್ಚಗಾಗುವ ಪರಿಣಾಮವನ್ನು ಬೀರುತ್ತದೆ ಮತ್ತು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ. ಮತ್ತೊಂದೆಡೆ, ಹಾಲು ತಂಪಾಗಿರುತ್ತದೆ. ಮೂಲಂಗಿ ತಿನ್ನುವುದು ಮತ್ತು ಹಾಲು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಇದು ಗ್ಯಾಸ್ಟ್ರಿಕ್​, ಎದೆಯುರಿ ಮತ್ತು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು.

 

Leave a Reply

Your email address will not be published. Required fields are marked *

error: Content is protected !!