ಉದಯವಾಹಿನಿ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಟಾಸ್ಕ್ ಅಂದ ಮೇಲೆ ಪೆಟ್ಟು ಮಾಡಿಕೊಳ್ಳೋದು ಸಹಜ. ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡುವ ವೇಳೆ ಸ್ಪಂದನಾ ಸೋಮಣ್ಣ ಅವರ ಕಾಲಿಗೆ ಪೆಟ್ಟಾಗಿದೆ. ಬಿಗ್ ಬಾಸ್ ಲೈವ್‌ನ ವಿಡಿಯೋ ಕ್ಲಿಪ್‌ಗಳು ವೈರಲ್ ಆಗುತ್ತಿದೆ. ಬಾಲ್ ಸಂಗ್ರಹಿಸುವ ಆಟದಲ್ಲಿ ಸಹ ಸ್ಪರ್ಧಿಗಳು ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಸ್ಪಂದನಾ ಮನೆಯಲ್ಲಿ ಕುಂಟುತ್ತಿರುವ ದೃಶ್ಯ ಈಗ ವೈರಲ್ ಆಗ್ತಿದೆ. ಅಷ್ಟೇ ಅಲ್ಲ ಗಿಲ್ಲಿ ಕಾಮಿಡಿಗೂ ಮನೆಮಂದಿ ನಕ್ಕಿದ್ದಾರೆ.ಈ ವಾರ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳಲಾಗಿ ಟಾಸ್ಕ್ ನಿಭಾಯಿಸಬೇಕಿತ್ತು. ಮನೆಯಲ್ಲಿ ಕಾವ್ಯ-ಗಿಲ್ಲಿ ಜೋಡಿಯಾದರೆ, ರಾಶಿಕಾ-ಸೂರಜ್, ಸ್ಪಂದನಾ -ಅಭಿಷೇಕ್, ಅಶ್ವಿನಿ-ರಘು, ಮಾಳು-ರಕ್ಷಿತಾ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿ ಆದರು.
ಬಾಲ್ ಟಾಸ್ಕ್‌ನಲ್ಲಿ ಸಹ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಸ್ಪಂದನಾ ಕೆಳಗೆ ಬಿದ್ದಿದ್ದರೂ ಅಭಿಷೇಕ್ ತನ್ನ ಕೈಲಿದ್ದ ಬಾಲ್ ರಕ್ಷಣೆ ಮಾಡಿಕೊಳ್ಳಲು ನಿಂತುಕೊಂಡು ಸ್ಪಂದನಾಳನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವಾಗ ಇತರ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದಿದ್ದಾರೆ ಎನ್ನಲಾಗಿದೆ.
ದೃಶ್ಯಗಳನ್ನು ನೋಡಿದರೆ, ಕಾಲಿಗೆ ಬ್ಯಾಂಡೇಜ್ ಮಾಡಿ ನೇರವಾಗಿಯೇ ಕಾಲನ್ನು ಇಟ್ಟುಕೊಳ್ಳುವುದಕ್ಕೆ ಬೆಲ್ಟ್ ಕೊಡಲಾಗಿದೆ. ಸ್ಪಂದನಾ ಚಿಕಿತ್ಸೆ ಪಡೆದುಕೊಂಡು ಬಂದ ನಂತರ ಅಭಿಷೇಕ್ ಸಹಾಯದಿಂದ ಓಡಾಡುವಾಗ ಗಿಲ್ಲಿ ನಟ, ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ನೋಟ ಸಿಂಗಾರವಾಯಿತೇ ಹಾಡಿನಲ್ಲಿ ಕಾಲೆಳೆದುಕೊಂಡು ನಡೆಯುವ ಸ್ಟೈಲ್ ಅನ್ನು ತೋರಿಸುತ್ತಾ ಮನೆ ಮಂದಿಯನ್ನು ನಗಿಸಿದ್ದಾರೆ.
