ಉದಯವಾಹಿನಿ, ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿನ್ನರ್ ಆಗಿದ್ದ ಸೂರಜ್ ನವೆಂಬರ್ 29 ರಂದು ವಿವಾಹವಾದರು. ಬಾಲ್ಯದ ಗೆಳತಿ ಸಂಜನಾ ಗೋಫಾನೆ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಸೂರಜ್ ಅವರ ವಿವಾಹದ ಹಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸೂರಜ್ ಚವಾಣ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ವಿವಾಹ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್ ವಿಶ್ ಮಾಡಿದ್ದಾರೆ.
ಒಂದು ಪೋಸ್ಟ್‌ನಲ್ಲಿ ಸಖತ್ ಟ್ರೆಡಿಶನಲ್ ಆಗಿ ಜೋಡಿ ಕಂಡರೆ, ಇನ್ನೊಂದು ಪೋಸ್ಟ್‌ನಲ್ಲಿ ಕ್ಲಾಸಿ ಮಾಡರ್ನ್ ಲುಕ್‌ನಿಂದ ಫ್ಯಾನ್ಸ್ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸೂರಜ್ ಅವರ ಸಹ-ಸ್ಪರ್ಧಿ ಆಗಿದ್ದ ಅಂಕಿತಾ ಪ್ರಭು ವಾಲಾವಲ್ಕರ್ ನವ ಜೋಡಿಗೆ ಶುಭ ಹಾರೈಸಿದರು.
“ಪ್ರಿಯ ಸೂರಜ್ ಮತ್ತು ಸಂಜನಾ, ಇಂದು ನೀವಿಬ್ಬರೂ ಹೊಸ ಜೀವನದಲ್ಲಿ ಕೈಜೋಡಿಸಿ ಹೆಜ್ಜೆ ಹಾಕುತ್ತಿದ್ದೀರಿ. ಈ ಹಾದಿ ಕೆಲವೊಮ್ಮೆ ಪ್ರಕಾಶಮಾನವಾಗಿರುತ್ತದೆ, ಕೆಲವೊಮ್ಮೆ ಕತ್ತಲೆಯಾಗಿರುತ್ತದೆ, ಕೆಲವೊಮ್ಮೆ ನೆರಳಿನಿಂದ ಕೂಡಿರುತ್ತದೆ, ಆದರೆ ಪರಸ್ಪರ ಪ್ರೀತಿ ಮತ್ತು ಬೆಂಬಲದಿಂದ, ಪ್ರತಿಯೊಂದು ಕಷ್ಟವನ್ನು ಸುಲಭವಾಗಿ ನಿವಾರಿಸಬಹುದು. ಜೀವನವು ಎಷ್ಟೇ ಬದಲಾವಣೆಗಳನ್ನು ತಂದರೂ, ಪರಸ್ಪರ ಗೌರವ, ವಾತ್ಸಲ್ಯ ಮತ್ತು ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ. ಸಣ್ಣ ಕ್ಷಣಗಳಲ್ಲಿ ಸಂತೋಷವನ್ನು ಕಂಡುಕೊಳ್ಳಿ, ಪರಸ್ಪರರ ನಗುವಿನಲ್ಲಿ ಜಗತ್ತನ್ನು ಜಯಿಸಿ, ಮತ್ತು ನಂಬಿಕೆ ಎಂದಿಗೂ ಕಡಿಮೆಯಾಗಲು ಬಿಡಬೇಡಿ. ನೀವು ಸಂತೋಷವಾಗಿರಿ ಎಂದು ಬರೆದುಕೊಂಡಿದ್ದಾರೆ.
