ಉದಯವಾಹಿನಿ, ಚಿಕ್ಕಮಗಳೂರು: ಮುಸ್ಲಿಮರು ಎಲ್ಲೂ ಈಶ್ವರ ಅಲ್ಹಾ ತೇರೇ ನಾಮ್ ಅಂತ ಹೇಳಿಲ್ಲ, ನಾನಂತೂ ಹೇಳಿದ್ದನ್ನು ಕೇಳಿಲ್ಲ. ಮಸೀದಿಗಳಲ್ಲೂ ಹೇಳಿಕೊಟ್ಟಿಲ್ಲ. ಮದ್ರಾಸಗಳಲ್ಲಿ ಹೇಳಿಕೊಟ್ಟಿದ್ರೆ ಭಯೋತ್ಪಾದಕರುಗಳೇ ಇರುತ್ತಿರಲಿಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ ಹೇಳಿದರು. ದತ್ತಪೀಠದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಹಿಂದೂಗಳು ರಾಮ್ ರಹೀಮ್ ಒಂದೇ ಎಂದು ಹೇಳ್ತಿದ್ದೀವಿ, ಮುಸ್ಲಿಮರು ಹೇಳ್ತಿಲ್ಲ. ರಾಮ್ ರಹೀಮ್ ಒಂದೇ ಎಂದು ಅವರು ಹೇಳಿಕೊಟ್ಟಿದ್ರೆ ಜಗಳಗಳು ಆಗ್ತಿರಲಿಲ್ಲ. ನಾವು ಅಲ್ಹಾ ದೇವ್ರು ಅನ್ನೋಕೆ ತೊಂದರೆ ಇಲ್ಲ. ನಮ್ಮ ಪರಂಪರೆ ಅದಕ್ಕೆ ಅವಕಾಶ ಕೊಡುತ್ತೆ. ಸಂಕುಚಿತ ಮನೋಭಾವದವರು ಬದಲಾಗಬೇಕು ಎಂದರು.
ಇಸ್ಲಾಂ ಹೆಸರಲ್ಲಿ ಅನ್ಯ ಧಾರ್ಮಿಕ ಕ್ಷೇತ್ರ ಕಬಳಿಸೋದು ಅನಾಗರೀಕತೆ, ಅಧರ್ಮ. ನಾಶ ಮಾಡೋದು ಧರ್ಮ ಆಗಲು ಸಾಧ್ಯವಿಲ್ಲ. ಸನಾತನ ಧರ್ಮ ಭಾರತೀಯ ಸ್ತ್ರೀಯರನ್ನ ಗೌರವಿಸುವ ಸಂಸ್ಕೃತಿ ಇದೆ. ಆದರೆ ಪರಸ್ತ್ರೀ ಮೇಲೆ ಅತ್ಯಾಚಾರ ಮಾಡು, ಅನ್ನೋದು ಧರ್ಮ ಆಗಲು ಸಾಧ್ಯವಿಲ್ಲ. ಇಸ್ಲಾಂ ಹೆಸರಲ್ಲಿ ಬಲತ್ಕಾರ, ಲೂಟಿ, ಮತಾಂತರ ಮಾಡಿದ್ದಾರೆ. ಇದನ್ನ ಭಾರತೀಯ ನಿದರ್ಶನಗಳು ಧರ್ಮ ಅನ್ನಲ್ಲ, ಪೈಶಾಚಿಕ ಮತ ಎನ್ನಬಹುದು ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!