ಉದಯವಾಹಿನಿ, ಜಿನೆವಾ: ಉಗಾಂಡಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿಪಕ್ಷಗಳು ಮತ್ತು ಮಾಧ್ಯಮಗಳ ಮೇಲೆ ತೀವ್ರತರವಾದ ದಮನವನ್ನು ವಿಶ್ವಸಂಸ್ಥೆ ಬುಧವಾರ ಖಂಡಿಸಿದೆ. ಆಪಾದಿತ ಅನಿಯಂತ್ರಿತ ಬಂಧನಗಳು. ಕಣ್ಮರೆಗಳು ಮತ್ತು ಚಿತ್ರಹಿಂಸೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.
ಪ್ರಮುಖ ವಿರೋಧ ಪಕ್ಷ ‘ನ್ಯಾಷನಲ್ ಯುನಿಟಿ ಪ್ಲಾಟ್‌ಫಾರ್ಮ್ ಪಾರ್ಟಿ'(ಎನ್‌ಯುಪಿ)ಯ ಸದಸ್ಯರು, ಬೆಂಬಲಿಗರು ಸೇರಿದಂತೆ ಕನಿಷ್ಠ 550 ಮಂದಿಯನ್ನು ಮತ್ತು ಅಧ್ಯಕ್ಷೀಯ ಅಭ್ಯರ್ಥಿ ಬಾಬಿ ವೈನ್ ರನ್ನು ಈ ವರ್ಷದ ಆರಂಭದಿಂದಲೂ ಬಂಧನದಲ್ಲಿ ಇರಿಸಿರುವ ಬಗ್ಗೆ ವಿಶ್ವಾಸಾರ್ಹ ವರದಿಗಳಿವೆ. ಇವರಲ್ಲಿ 300ಕ್ಕೂ ಅಧಿಕ ಜನರನ್ನು ಚುನಾವಣೆಯ ಸೆಪ್ಟೆಂಬ‌ರ್ ತಿಂಗಳಲ್ಲಿ ಪ್ರಚಾರ ಕಾರ್ಯ ಪ್ರಾರಂಭವಾದಾಗಿನಿಂದ ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ ಹೇಳಿದೆ.

ಬಂಧಿತರಲ್ಲಿ ಹಲವರು ಪೊಲೀಸ್ ಕಸ್ಟಡಿಯಲ್ಲಿದ್ದು ಸಾರ್ವಜನಿಕ ಉಪದ್ರವ, ಕಾನೂನು ಆದೇಶಗಳಿಗೆ ಅವಿಧೇಯತೆ, ಆಕ್ರಮಣ, ಅಡ್ಡಿ ಮತ್ತು ಹಿಂಸಾಚಾರದ ಪ್ರಚೋದನೆ ಮುಂತಾದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಎನ್‌ಯುಪಿ ಚುನಾವಣಾ ರ್ಯಾಲಿ ನಡೆಸಲು ಉದ್ದೇಶಿರುವ ಪ್ರದೇಶಗಳಲ್ಲಿ ಭಾರೀ ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜಿಸಲಾಗಿತ್ತು. ಎನ್‌ಯುಪಿ ಬೆಂಬಲಿಗರನ್ನು ಚದುರಿಸಲು ಪಡೆಗಳು ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ, (ಕಿರಿಕಿರಿ ಉಂಟು ಮಾಡುವ ರಾಸಾಯನಿಕಗಳನ್ನು ಪ್ರಯೋಗಿಸಿದ್ದು ಹಲವರು ಗಾಯಗೊಂಡಿದ್ದಾರೆ. ಪೂರ್ವ ಇಗಾಂಗಾ ನಗರದಲ್ಲಿ ಕಳೆದ ವಾರ ನಡೆದಿದ್ದ ಚುನಾವಣಾ ರ್ಯಾಲಿಯ ಸಂದರ್ಭ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು ಓರ್ವ ವ್ಯಕ್ತಿ ಮೃತಪಟ್ಟಿರುವ ವರದಿಯಿದೆ ಎಂದು ಮಾನವ ಹಕ್ಕುಗಳ ಏಜೆನ್ಸಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!