ಉದಯವಾಹಿನಿ, ವಾಷಿಂಗ್ಟನ್‌: ಹೋದಲ್ಲಿ ಬಂದಲ್ಲಿ ನನಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಇಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊನೆಗೂ ಒಂದು ಶಾಂತಿ ಪ್ರಶಸ್ತಿ ಸಿಕ್ಕಿದೆ. ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿಯನ್ನು ಟ್ರಂಪ್‌ ಅವರಿಗೆ ನೀಡಲಾಗಿದೆ. ವಾಷಿಂಗ್ಟನ್‌ ಡಿಸಿ ಕೆನಡಿ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಶಸ್ತಿ ಪ್ರಧಾನಕ್ಕೂ ಮೊದಲು ಡೊನಾಲ್ಡ್‌ ಟ್ರಂಪ್‌ ಅವರು ವಿಶ್ವದ ಇತರ ನಾಯಕರ ಜೊತೆಗೆ ಮಾತನಾಡುತ್ತಿರುವ ಮತ್ತು ರಾಜತಾಂತ್ರಿಕ ಸಾಧನೆಯನ್ನು ಬಣ್ಣಿಸುವ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ವಿಡಿಯೋ ಆರಂಭದಲ್ಲಿ ಮೋದಿ ಮತ್ತು ಟ್ರಂಪ್‌ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ತೋರಿಸಲಾಯಿತು.
ವಿಡಿಯೋದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುರೋಪ್‌, ಅರಬ್‌ ನಾಯಕರ ಜೊತೆ ಟ್ರಂಪ್‌ ಮಾತನಾಡುತ್ತಿರುವುದು, ಬೇರೆ ದೇಶಗಳ ನಾಯಕರನ್ನು ಕೂರಿಸಿ ಶಾಂತಿ ಮಾತುಕತೆ ನಡೆಸುತ್ತಿರುವ ತುಣುಕನ್ನು ಪ್ರದರ್ಶಿಸಲಾಯಿತು. ಭಾಷಣದಲ್ಲಿ ಟ್ರಂಪ್‌, ಇದು ನಿಜಕ್ಕೂ ನನ್ನ ಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ. ಪ್ರಶಸ್ತಿಗಿಂತಲೂ ಮುಖ್ಯವಾಗಿ ನಾವು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇವೆ. ಇದಕ್ಕೆ ಕಾಂಗೋ ಉದಾಹರಣೆಯಾಗಿದೆ. ಭಾರತ, ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳಿದರು. ಫುಟ್‌ಬಾಲ್‌ ಇಂದು ಜಾಗತಿಕ ಕ್ರೀಡೆಯಾಗಿದೆ. ಈ ಕಾರಣಕ್ಕೆ ಜಾಗತಿಕ ಸಂಸ್ಥೆಯಾಗಿರುವ ಫಿಫಾ ಈ ವರ್ಷದಿಂದ ಶಾಂತಿ ಪ್ರಶಸ್ತಿಯನ್ನು ನೀಡುವುದಾಗಿ ಹೇಳಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!