
ಉದಯವಾಹಿನಿ,
ವಿವಿಧ ಕಾರಣಗಳಿಂದಾಗಿ ದೇಶದಲ್ಲಿ ಟೊಮೊಟೋ ಬೆಲೆ ಗಗನಕ್ಕೇರಿದ್ದು, ಹೆಚ್ಚಿನ ಕಡೆಗಳಲ್ಲಿ ಕೆ.ಜಿ.ಗೆ ೨೦೦ ರೂ. ದಾಟಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಪ್ರಸಿದ್ಧ ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿರುವ ಮೆಕ್‌ಡೊನಾಲ್ಡ್ ಇದೀಗ ತನ್ನ ಉತ್ತರ ಭಾರತ ಹಾಗೂ ಪರ‍್ವ ಭಾರತದಲ್ಲಿನ ಮಳಿಗೆಗಳ ಆಹಾರ ಉತ್ಪನ್ನಗಳಲ್ಲಿ ಟೊಮೊಟೋ ಬಳಕೆಯನ್ನು ಸ್ಥಗಿತಗೊಳಿಸಿದೆ. ಭಾರೀ ಮಳೆ ಹಾಗೂ ಇತರೆ ಕಾರಣಗಳಿಂದಾಗಿ ಕಳೆದೊಂದು ವಾರಗಳಲ್ಲಿ ಭಾರತದಲ್ಲಿ ಟೊಮೊಟೋ ಬೆಲೆ ಗಗನಕ್ಕೇರಿದೆ. ಪರಿಣಾಮ ಹೆಚ್ಚಿನ ಕಡೆಗಳಲ್ಲಿ ಕೆ.ಜಿ ಟೊಮೊಟೋ ಬೆಲೆ ೨೦೦ ರೂ. ದಾಟಿದೆ. ಸಾಮಾನ್ಯವಾಗಿ ೪೦-೫೦ರ ಆಸುಪಾಸಿನಲ್ಲಿದ್ದ ಟೊಮೊಟೊ ಬೆಲೆ ಹಠಾತ್ ಏರಿಕೆಯಾಗಿರುವು ದೇಶದಲ್ಲಿ ಜನಸಾಮಾನ್ಯರ ಬೆಲೆ ಸುಡುವಂತೆ ಮಾಡಿದೆ. ಅದರಲ್ಲೂ ಫಾಸ್ಟ್‌ಫುಡ್‌ಗಳಲ್ಲಿ ಟೊಮೊಟೋ ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ ಇದೀಗ ಗ್ರಾಹಕರಿಗೆ ಇದರ ಬೆಲೆಏರಿಕೆಯ ಬಿಸಿ ಯಾದಂತಾಗಿದೆ.
