ಉದಯವಾಹಿನಿ,  ಹೈದರಾಬಾದ್ : ಬಹುಭಾಷಾ ತಾರೆ ರಾಕುಲ್ ಪ್ರೀತ್ ಸಿಂಗ್ ಫೋಟೋಶೂಟ್ ಮೂಲಕ ಮತ್ತೆ ಮಿಂಚಿದ್ದಾರೆ.
ಬಂಗಾರ ಬಣ್ಣದ ಉಡುಗೆ ತೊಟ್ಟುಕೊಂಡು ಫಳ ಫಳ ಹೊಳೆಯುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ . ರಾಕುಲ್ ಪ್ರೀತ್ ಸಿಂಗ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಾಕುಲ್ ಪ್ರೀತ್ ಸಿಂಗ್ ಟಾಲಿವುಡ್ ನ ಖ್ಯಾತ ನಟಿ. ಲೌಕ್ಯಂ,ನನ್ನಕು ಪ್ರೇಮತೋ,ಧ್ರುವ ಮುಂತಾದ ಹಿಟ್ ಸಿನಿಮಾಗಳನ್ನು ಕೊಟ್ಟವರು .
ರಾಕುಲ್ ಪ್ರೀತ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತೆಲುಗಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ. ಆದರೆ ಈಗ ಈ ನಟಿಗೆ ತೆಲುಗಿನಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿಲ್ಲ,ಅವಕಾಶಗಳು ಸಿಗದ ಕಾರಣ ತೆಲುಗಿನ ಚಿತ್ರಗಳು ಕಡಿಮೆಯಾದವು.
ಹಾಗಿದ್ದರೆ ಕೂಡಾ ಪವನ್ ಕಲ್ಯಾಣ್ ಅವರ ಬ್ರೋ ಸಿನಿಮಾದಲ್ಲಿ ನಟಿಸಲು ರಾಕುಲ್ ಗೆ ಆಫರ್ ಬಂದಿದ್ದು ಆದರೆ ಚಿತ್ರೀಕರಣದ ಕೊನೆಯ ಕ್ಷಣದಲ್ಲಿ ಡೇಟ್ಸ್ ಇಲ್ಲದ ಕಾರಣ ರಾಕುಲ್ ಅವಕಾಶ ಕಳೆದುಕೊಂಡಿದ್ದಾರೆ ಸುದ್ದಿ ವೈರಲ್ ಆಗಿದೆ.
ಇದೀಗ ನಟಿ ಸುಂದರ ಉಡುಗೆಯಲ್ಲಿ ಪೋಸ್ ನೀಡಿದ್ದು ನೆಟ್ಟಿಗರು ಮೆಚ್ಚಿದ್ದಾರೆ. ಅಭಿಮಾನಿಗಳು ರಾಕುಲ್‌ಗೆ ಡೈಮಂಡ್ ಡ್ರೆಸ್ ಹಾಕಿದ್ದೀರಾ ಎಂದು ಕೇಳಿದ್ದು. ಫೋಟೋ ಭಾರೀ ಮೆಚ್ಚುಗೆ ಪಡೆದಿದೆ.
ಪವನ್ ಕಲ್ಯಾಣ್-ಸಾಯಿ ಧರಮ್ ತೇಜ್ ಅಭಿನಯದ ’
ಬ್ರೋ ಚಿತ್ರ ತೆರೆಗೆ ಬರುತ್ತಿದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಈಗ ಎರಡು ಹಾಡುಗಳ ಬಾಕಿ ಇವೆ ಎನ್ನಲಾಗಿದೆ.ಈ ಎರಡು ಹಾಡುಗಳಲ್ಲಿ ಒಂದನ್ನು ಸ್ಪೆಷಲ್ ಸಾಂಗ್ ಮಾಡಲು ನರ‍್ದೇಶಕ-ನರ‍್ಮಾಪಕರು ತಯಾರಿ ನಡೆಸಿದ್ದು ,ಈ ಹಾಡು ಇಬ್ಬರು ನಾಯಕರ ಕುರಿತಾಗಿದೆ.
ಹಾಡಿನಲ್ಲಿ ನೃತ್ಯ ಮಾಡಲು ತಮನ್ನಾ, ಶ್ರುತಿ ಹಾಸನ್ ಮತ್ತು ಶ್ರೀಲೀಲಾ ಅವರಂತಹ ಅನೇಕ ಹೆಸರುಗಳನ್ನು ಪರಿಗಣಿಸಿದ ತಂಡವು ಅಂತಿಮವಾಗಿ ರಾಕುಲ್ ಹೆಸರನ್ನು ಅವರನ್ನು ಅಂತಿಮಗೊಳಿಸಿತು.ನಟಿ ಕೂಡ ಇದಕ್ಕೆ ಓಕೆ ಎಂದಿದ್ದರು. ನರ‍್ದೇಶಕ ಮತ್ತು ನರ‍್ಮಾಪಕರು ಶೂಟಿಂಗ್ ಪ್ಲಾನ್ ಕೂಡಾ ಮಾಡಿದ್ದಾರಂತೆ ಆದರೆ ಸದ್ಯ ರಾಕುಲ್ ಪ್ರೀತ್ ಈ ತೆಲುಗು ಚಿತ್ರಕ್ಕೆ ಸಂಪರ‍್ಣ ವಿರಾಮ ಹಾಕಿದ್ದಾರೆ. ಹಿಂದಿಯಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ರಾಕುಲ್ ಪ್ರೀತ್ ಇತ್ತೀಚೆಗೆ ಹಿಂದಿಯಲ್ಲಿ ಛತ್ರಿವಾಲಿ ಎಂಬ ಬೋಲ್ಡ್ ಸಿನಿಮಾ ಮಾಡಿದ್ದಾರೆ. ಇದನ್ನು ಇತ್ತೀಚೆಗೆ ಓಟಿಟಿನಲ್ಲಿ ಬಿಡುಗಡೆ ಮಾಡಲಾಗಿದೆ.
ಟಾಲಿವುಡ್ ಜನಪ್ರಿಯ ನಟಿ ರಾಕುಲ್ ಪ್ರೀತ್ ಸಿಂಗ್ ಬಿಕಿನಿಯಲ್ಲಿ ನಡುಗುವ ಚಳಿಯಲ್ಲಿ ನೀರಿಗೆ ಬಂದಿದ್ದಾರೆ. ಮೈನಸ್ ಡಿಗ್ರಿ ತಾಪಮಾನದಲ್ಲಿ ನಟಿ ಬಿಕಿನಿ ಧರಿಸಿ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ರಾಕುಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಈ ಹಿಂದೆಯೂ ರಾಕುಲ್ ಮದುವೆಯ ಬಗ್ಗೆ ವದಂತಿಗಳು ಹಬ್ಬಿದ್ದವು. ಹಿಂದಿಯ ಯುವ ನರ‍್ಮಾಪಕ ಮತ್ತು ನಟ ಜಾಕಿ ಭಗ್ನಾನಿ ಅವರನ್ನು ರಾಕುಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ.

Leave a Reply

Your email address will not be published. Required fields are marked *

error: Content is protected !!