
ಉದಯವಾಹಿನಿ, ಚಿತ್ರದುರ್ಗ: ಜಿಲ್ಲೆಯಲ್ಲಿರುವ ನಿರುದ್ಯೋಗ ಯುವಕ-ಯುವತಿಯರಿಗೆ ಕೈಗಾರಿಕೆ, ಗರ‍್ಮೆಂಟ್ಸ್ ಸೇರಿದಂತೆ ವಿವಿಧ ಕಂಪನಿಗಳಲ್ಲಿನ ಬೇಡಿಕೆ ಆಧಾರದ ಮೇಲೆ, ಕೌಶಲ ತರಬೇತಿ ನೀಡಿ, ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂಪನಿಗಳಿಗೆ ಮಾನವ ಸಂಪನ್ಮೂಲದ ಅವಶ್ಯಕತೆ ಇರುತ್ತದೆ. ಕಂಪನಿ ಹಾಗೂ ಕೈಗಾರಿಕೆ ಆಧಾರಿತ ಬೇಡಿಕೆಗಳನ್ನು ಗುರುತಿಸಿ, ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ತರಬೇತಿ ನೀಡಿದ್ದಲ್ಲಿ, ಅಂತಹ ಅಭ್ರ‍್ಥಿಗಳಿಗೆ ಉದ್ಯೋಗ ಒದಗಿಸಿಕೊಡುವಲ್ಲಿ ಉಪಯೋಗವಾಗುತ್ತದೆ ಎಂದರು.
ದತ್ತಾಂಶ ಸಂಗ್ರಹಿಸಿ: ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ಪರ‍್ವ, ಪದವಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ವಿವಿಧ ಕರ‍್ಸ್‍ಗಳಲ್ಲಿ ಓದುತ್ತಿರುವ ವಿದ್ಯರ‍್ಥಿಗಳ ದತ್ತಾಂಶ ಸಂಗ್ರಹಿಸಬೇಕು ಹಾಗೂ ನಿರುದ್ಯೋಗ ಯುವಕ-ಯುವತಿಯರನ್ನು ಗುರುತಿಸಿ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ನಿಗಧಿತ ಗುರಿಯೊಂದಿಗೆ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗಳು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿ, ೨೦೨೨-೨೩ನೇ ಸಾಲಿಗೆ ರ‍್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಸ್ಕಿಲ್ ಕನೆಕ್ಟ್ ಪರ‍್ಟಲ್ ತೆರೆದಿದ್ದು, ಉದ್ಯೋಗಧಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಏಕಗವಾಕ್ಷಿ ವೇದಿಕೆಯಲ್ಲಿ ಸಂ
ರ್ಕಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಅಭ್ರ‍್ಥಿಗಳ ನೋಂದಣಿ ಮಾಡಿಸಲು ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಲಾಗಿದೆ. ಇದುವರೆಗೂ ೧೫೯೨ ಉದ್ಯೋಗಾಕಾಂಕ್ಷಿಗಳು ಪರ‍್ಟಲ್‍ನಲ್ಲಿ ನೋಂದಾಯಿಸಲಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು. ಸ್ಕಿಲ್ ಕನೆಕ್ಟ್ ಪರ‍್ಟಲ್‍ನಲ್ಲಿ ನಿರುದ್ಯೋಗ ಯುವಕ-ಯುವತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿ ಮಾತನಾಡಿ, ೨೦೨೪ರ ವಿಶ್ವ ಕೌಶಲ್ಯ ಸ್ರ‍್ಧೆ ಪ್ರಾನ್ಸ್‍ನಲ್ಲಿ ನಡೆಯುತ್ತಿದ್ದು ೭೫ಕ್ಕಿಂತ ಹೆಚ್ಚು ದೇಶಗಳು ಇದರಲ್ಲಿ ಭಾಗವಹಿಸಿರುತ್ತವೆ. ಆದುದರಿಂದ ರ‍್ನಾಟಕ ಕೌಶಲ್ಯಾಭಿವೃದ್ಧಿ ನಿಗವು ಇಂಡಿಯಾ ಸ್ಕಿಲ್-೨೦೨೩ರ ಸ್ರ‍್ಧೆಯನ್ನು ಪ್ರಾರಂಭಿಸಿದ್ದು, ಇದುವರೆಗೂ ಜಿಲ್ಲೆಯ ಎಲ್ಲಾ ಇಂಜಿನಿಯರಿಂಗ್, ಐಟಿಐ, ಡಿಪ್ಲೊಮಾ ಕಾಲೇಜುಗಳಿಗೆ ಭೇಟಿ ನೀಡಿ ಸುಮಾರು ೮೦ ಅಭ್ರ‍್ಥಿಗಳು ತಮ್ಮ ಕೌಶಲ್ಯಕ್ಕೆ ಸಂಬಂಧಿಸಿದಂತೆ ವೀಡಿಯೋಗಳನ್ನು ಆಪ್‍ಲೋಡ್ ಮಾಡಿರುತ್ತಾರೆ. ಯೋಗ, ಕೇಶ ವಿನ್ಯಾಸ, ವೆಲ್ಡಿಂಗ್, ಅಡುಗೆಗೆ ಸಂಬಂಧಿಸಿದ ಸ್ಕೀಲ್‍ಗಳು ಆಗಿರುತ್ತದೆ. ಈ ಬಗ್ಗೆ ಇನ್ನೂ ವಲಯ ಮಟ್ಟದಲ್ಲಿ ಆಯ್ಕೆಗೆ ಬಾಕಿ ಇರುತ್ತದೆ ಎಂದರು.
ವಿಶ್ವ ಕೌಶಲ್ಯ ಸ್ರ‍್ಧೆಯಲ್ಲಿ ಗೆಲುವು ಪಡೆಯುವ ನಿಟ್ಟಿನಲ್ಲಿ ವಿವಿಧ ಕೌಶಲ್ಯಗಳ ಸ್ರ‍್ಧೆಯಲ್ಲಿ ಯಾವುದಾದರೂ ಒಂದು ಕೌಶಲ್ಯ ಸ್ರ‍್ಧೆಗೆ ಹೆಚ್ಚಿನ ಗಮನನೀಡಿ, ಗೆಲವು ಪಡೆಯಲು ಪ್ರಯತ್ನಿಸಿ ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಪಿಎಂ ಸ್ವನಿಧಿ ಸೌಲಭ್ಯ ರ‍್ಹರಿಗೆ ತಲುಪಿಸಿ: ಬೀದಿಬದಿ ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರಲ್ಲಿ ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿಯ ವ್ಯಾಪಾರಿಗಳಿಗೆ ರೂ.೧೦ ಸಾವಿರ ಸಾಲ ಸಿಗಲಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಿಗಳಿದ್ದು, ಈ ಯೋಜನೆಯಡಿ ರ‍್ಹ ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ ತಲುಪಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಿಎಂ ಸ್ವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ೪೬೪೩ ಗುರಿ ನಿಗಧಿಪಡಿಸಿದ್ದು, ೪೬೯೫ ರ‍್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ೪೦೦೭ ರ‍್ಜಿಗಳು ಅನುಮೋದನೆಯಾಗಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನರ‍್ದೇಶಕ ಬಿ.ಆನಂದ್, ಸಮಾಜ ಕಲ್ಯಾಣ ಇಲಾಖೆ ಉಪನರ‍್ದೇಶಕ ಜಗದೀಶ್ ಹೆಬ್ಬಳ್ಳಿ, ಕರ‍್ಮಿಕ ಅಧಿಕಾರಿ ಯಶೋಧರ, ನಗರಾಭಿವೃದ್ಧಿ ಕೋಶದ ಯೋಜನಾ ನರ‍್ದೇಶಕ ಮಹೇಂದ್ರ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನರ‍್ದೇಶಕಿ ಭಾರತಿ ಆರ್ ಬಣಕಾರ್, ಪದವಿಪರ‍್ವ ಶಿಕ್ಷಣ ಇಲಾಖೆ ಉಪನರ‍್ದೇಶಕ ರಾಜು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
