ಉದಯವಾಹಿನಿ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ಗೆ ಒಂದರ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. 82 ಲಕ್ಷ ರೂ. ಹಣದ ಮೂಲ ಕುರಿತು ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ ಅತ್ಯಾಪ್ತ ಪ್ರದೋಷ್ ನೀಡಿರುವ ಹೇಳಿಕೆ ಮುಳುವಾದಂತೆ ಕಾಣ್ತಿದೆ.
ತನ್ನ ಮನೆಯಲ್ಲಿ ಸಿಕ್ಕ 30 ಲಕ್ಷ ರೂ. ಹಣಕ್ಕೆ ಪಕ್ಕಾ ಲೆಕ್ಕ ಕೊಡದ ಪ್ರದೋಷ್ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆಮಾತನಾಡಿದ್ದಾರೆ. ಮನೆಯಲ್ಲಿ ಸಿಕ್ಕ 30 ಲಕ್ಷ ಹಣ ನನ್ನದೂ ಅಲ್ಲ, ನನ್ನ ಕುಟುಂಬಕ್ಕೂ ಸೇರಿದ್ದಲ್ಲ ಅಂತ ಹೇಳಿದ್ದಾರೆ. ಹಾಗಿದ್ದ ಮೇಲೆ ಆ ಹಣ ಎಲ್ಲಿಂದ ಬಂತು? ಹಣದ ಮೂಲ ಯಾವುದು ಅನ್ನೋದನ್ನ ಬಹಿರಂಗಪಡಿಸಲು ಹಿಂದೇಟು ಹಾಕಿದ್ದಾರೆ. ಇದರಿಂದ ಕೊಲೆ ಆರೋಪಿ ದರ್ಶನ್‌ನ ಮತ್ತೆ ವಿಚಾರಣೆಗೆ ಒಳಪಡಿಸಲು ಆದಾಯ ತೆರಿಗೆ ಇಲಾಖೆ ತಯಾರಿ ನಡೆಸಿದೆ.
ಪ್ರಶ್ನೆ: 30 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾದ ಹಣದ ಮೂಲವನ್ನು ದಯವಿಟ್ಟು ಒದಗಿಸಿ.
ಉತ್ತರ: ಸರ್, ಮೇಲೆ ತಿಳಿಸಿದ 30,00,000/- ರೂ. ನಗದು ವಶಪಡಿಸಿಕೊಳ್ಳಲಾದ ಹಣದ ಮೂಲ ನನಗೆ ತಿಳಿದಿಲ್ಲ. ಏಕೆಂದರೆ ಅದು ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಸೇರಿಲ್ಲ.
ಪ್ರಶ್ನೆ: 2024ರ ಜೂನ್ 12ರಂದು ನಿಮ್ಮ ನಿವಾಸದಲ್ಲಿ ಪತ್ತೆಯಾದ ಮತ್ತು ವಶಪಡಿಸಿಕೊಂಡ ಹಣದ ಮೂಲದ ಬಗ್ಗೆ ಸರಿಯಾದ ವಿವರಣೆ ಇಲ್ಲದಿದ್ದರೆ, 30,00,000/- ರೂ.ಗಳ ಸಂಪೂರ್ಣ ನಗದನ್ನು ವಶಪಡಿಸಿಕೊಳ್ಳಲಾಗುತ್ತದೆ. ಇದರ ಬಗ್ಗೆ ನಿಮಗೆ ಯಾವುದೇ ಆಕ್ಷೇಪಣೆ/ಕಾಮೆಂಟ್‌ಗಳಿವೆಯೇ? ಉತ್ತರ: ಸರ್, 2024ರ ಜೂನ್ 12ರಂದು ನನ್ನ ನಿವಾಸದಿಂದ ಪತ್ತೆಯಾದ ಮತ್ತು ವಶಪಡಿಸಿಕೊಂಡ ಹಣದ ಮೂಲ, 30,00,000/- ರೂ.ಗಳ ನಗದು ಇನ್ನೂ ವಿವರಿಸಲಾಗಿಲ್ಲ ಅನ್ನೋದನ್ನ ಒಪ್ಪುತ್ತೇನೆ. ಅದನ್ನು ವಶಪಡಿಸಿಕೊಳ್ಳಬಹುದು ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಬಹುದು ಎಂದು ತಿಳಿಸಿದ್ದಾರೆ.
