ಉದಯವಾಹಿನಿ,  ಪುಣೆ : ಖ್ಯಾತ ಮರಾಠಿ ನಟ ರವೀಂದ್ರ ಮಹಾಜನಿ (೭೭) ಮಾವಲ್ ತಾಲೂಕಿನ ತಾಳೆಗಾಂವ್ ದಭಾಷೆ ಬಳಿಯ ಅಂಬಿ ಗ್ರಾಮದ ಬಾಡಿಗೆ ಫ್ಲಾಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ ದರ‍್ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ, ಬಳಿಕ ಘಟನೆ ಬೆಳಕಿಗೆ ಬಂದಿದೆ.
ನಟ ರವೀಂದ್ರ ಮಹಾಜನಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲ ದಿನಗಳ ಹಿಂದೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಾಗಾಗಿ ಅವರು ಹೆಚ್ಚು ತಿರುಗಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.ಶಸ್ತ್ರಚಿಕಿತ್ಸೆ ನಂತರ ಅಂಬಿ ಗ್ರಾಮದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.
ತಲೇಗಾಂವ್ ಹಿರಿಯ ಪೊಲೀಸ್ ಅಧಿಕಾರಿಗಳ ಮಾಹಿತಿಯಂತೆ ಮಹಾಜನಿ ಮೂರು ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಳೆಗಾಂವ್ ದಭಾಡೆ ಆಸ್ಪತ್ರೆಗೆ ಕಳುಹಿಸಲಾಗಿದ್ದ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರವೀಂದ್ರ ಮಹಾಜನಿ ಅವರು ೧೯೪೯ರಲ್ಲಿ ಬೆಳಗಾವಿಯಲ್ಲಿ ಜನಿಸಿದ್ದರು
ಅವರ ತಂದೆ ಹೆಚ್.ಆರ್ ಮಹಾಜನಿ ಪ್ರಸಿದ್ಧ ಪತ್ರರ‍್ತರಾಗಿದ್ದರು. ಮಹಾಜನಿ ಅವರು ಮುಂಬೈಚಾ ಫೌಜ್ಜಾರ್, ಝೂಂಜ್’ ಮತ್ತು ಕಲತ್ ನಕಲತ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!