ಉದಯವಾಹಿನಿ, ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರ ಅಪಹರಣ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಂದ್ ಪ್ರಾಂತ್ಯದಲ್ಲಿ ಮಂಗಳವಾರ  ಹಿಂದೂ ಮಹಿಳೆ ಮತ್ತು ಆಕೆಯ ಮಗಳನ್ನು ಬಂದೂಕುಧಾರಿ ದುಷ್ಕರ್ಮಿಗಳು ಅಪಹರಿಸಿದ್ದಾರೆ ಕರಾಚಿಯ ಶೇರ್ ಶಾ ಪ್ರದೇಶದ ಸಿಂಧಿ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ.ಪ್ರಾಥಮಿಕ ವರದಿಗಳ ಪ್ರಕಾರ, ಮಹಿಳೆ ತನ್ನ ಮಗಳೊಂದಿಗೆ ಮನೆಯಿಂದ ಹೊರಬಂದ ಕೂಡಲೇ ಮೂವರು ಬಂದೂಕುಧಾರಿ ವ್ಯಕ್ತಿಗಳು, ಬಲವಂತವಾಗಿ ಆಲ್ಲೊ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಈ ಘಟನೆಯು ಸಮುದಾಯದಲ್ಲಿ ಭಾರಿ ಅತಂಕಕ್ಕೆ ಎಡೆಮಾಡಿದೆ.
ರಾಣಿ ಮತ್ತು ಅವರ ಅಪ್ರಾಪ್ತ ಮಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಅಪಹರಣಕಾರರಲ್ಲಿ ಒಬ್ಬರಿಗೆ ಮದುವೆ ಮಾಡುತ್ತಾರೆ ಎಂಬ ಆತಂಕದಲ್ಲಿ ಅವರ ಕುಟುಂಬ ಇದೆ ಎಂದು ಸಿಂದ್ ಪ್ರಾಂತ್ಯದ ಹಿಂದೂ ಸಮುದಾಯದ ನಾಗರಿಕ ಹಕ್ಕುಗಳ ಹೋರಾಟಗಾರ ಶಿವ ಕಾಚಿ ಹೇಳಿದ್ದಾರೆ.
ಪ್ರಕರಣ ಸಂಬಂಧ ದೂರು ದಾಖಲಿಸಿದ್ದೇವೆ. ಆದರೆ, ಮೂವರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಹಿಂದೂ ಸಮುದಾಯದ ತಾಯಿ ಮತ್ತು ಅವರ ಮಗಳನ್ನು ಅಪಹರಿಸಿದ ರೀತಿ ತೀವ್ರ ಆತಂಕಕಾರಿಯಾಗಿದೆ ಎಂದೂ ಅವರು ಹೇಳಿದ್ದಾರೆ.
ಹಿಂದೂ ಹುಡುಗಿಯರು ಮತ್ತು ಮಹಿಳೆಯರನ್ನು ಆಗಾಗ್ಗೆ ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ವಯಸ್ಸಾದ ಮುಸ್ಲಿಂ ವ್ಯಕ್ತಿಗಳ ಜೊತೆ ಮದುವೆ ಮಾಡಲಾಗುತ್ತಿರುವುದರಿಂದ ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಮದು ಅವರು ಮನವಿ ಮಾಡಿದ್ದಾರೆ.
ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸುವ ಈ ಕೃತ್ಯದಲ್ಲಿ ಭಾಗಿಯಾಗಿರುವ ಗುಂಪುಗಳಿಂದ ತಮಗೆ ಜೀವ ಬೆದರಿಕೆ ಇದೆ ಎಂದೂ ಅವರ ಹೇಳಿದ್ದಾರೆ.
ಫೋನ್ ಮೂಲಕ ನನಗೆ ಕೊಲೆ ಬೆದರಿಕೆ ಬಂದಿದೆ. ಆದರೂ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ. ಈ ನಡುವೆ, ಸಿಂದ್‌ ಪ್ರಾಂತ್ಯದ ಉಮರ್ಕೋಟ್ ನಗರದಲ್ಲಿ ಮತ್ತೊಬ್ಬ ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿದ್ದಾರೆ. ಭಾಗ್ವಿ ಎಂಬ ಮಹಿಳೆ ತನ್ನ ಪತಿಯ ಜೊತೆ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಅಪಹರಣಕ್ಕೆ ಯತ್ನಿಸಿದೆ. ಸ್ಥಳದಲ್ಲಿದ್ದ ಜನ ಮಧ್ಯಪ್ರವೇಶಿಸಿದ್ದರಿಂದ ಅವರ ಯತ್ನ ವಿಫಲವಾಗಿದೆ.

Leave a Reply

Your email address will not be published. Required fields are marked *

error: Content is protected !!