ಉದಯವಾಹಿನಿ, ಕೈರೊ: ಸುಡಾನ್‌ನ ಕೊರ್ಡೊಫಾನ್‌ನ ಶಿಶುವಿಹಾರ ಮತ್ತು ಇತರ ಸ್ಥಳಗಳ ಮೇಲೆ ಕಳೆದ ವಾರ ನಡೆದ ಡೋನ್ ದಾಳಿಯಲ್ಲಿ 63 ಮಕ್ಕಳು ಸೇರಿದಂತೆ 114 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ತಿಳಿಸಿದ್ದಾರೆ.
ಕಳೆದ ಕಾಗೋಲಿಯಲ್ಲಿ ಪ್ರತ್ಯೇಕ ಡೋನ್ ದಾಳಿ ನಡೆದಿದೆ. ಮೊದಲು ಶಿಶುವಿಹಾರವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಬಳಿಕ ಬದುಕುಳಿದವರ ರಕ್ಷಣೆಯಲ್ಲಿ ತೊಡಗಿದ್ದ ವೈದ್ಯರ ಮೇಲೆ ದಾಳಿ ಮಾಡಲಾಗಿದೆ. ಸಂವಹನದ ಕಡಿತದಿಂದ ಆ ವೇಳೆ ಸಾವಿನ ನಿಖರ ಸಂಖ್ಯೆ ದೊರೆತಿರಲಿಲ್ಲ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.
ನಾಗರಿಕರು ಮತ್ತು ಆರೋಗ್ಯ ಸೌಲಭ್ಯಗಳ ಮೇಲಿನ ಈ ಅರ್ಥಹೀನ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸುತ್ತದೆ ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡುವ ಜೊತೆಗೆ ಮಾನವೀಯ ನೆರವನ್ನು ಹೆಚ್ಚಿಸುತ್ತದೆ’ ಎಂದು ಡಬ್ಲ್ಯುಎಚ್‌ಒ ನಿರ್ದೇಶಕ ಟೆಡೋಸ್ ಅದನೊಮ್ ಗೆಬ್ರಿಯಸಸ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ನಾಗರಿಕರ ಮೇಲಿನ ದಾಳಿಗೆ ಅರೆಸೇನಾ ಪಡೆಯ ಕ್ಷಿಪ್ರ ಕಾರ್ಯಪಡೆ ಕಾರಣ ಎಂದು ವೈದ್ಯರು ಆರೋಪಿಸಿದ್ದಾರೆ. ಸುಡಾನ್ ಸೇನಾ ಪಡೆ ಮತ್ತು ಅರೆಸೇನಾ ಪಡೆಯ ಕ್ಷಿಪ್ರ ಕಾರ್ಯಪಡೆ ನಡುವೆ ಎರಡು ವರ್ಷಗಳಿಂದ ಆತಂರಿಕ ಸಂಘರ್ಷ ನಡೆಯುತ್ತಿದೆ.
