ಉದಯವಾಹಿನಿ, ಸೂಪರ್‌ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬದ ವಿಶೇಷವಾಗಿ ಡಿಸೆಂಬರ್ 12ರಂದು ಪಡೆಯಪ್ಪ ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ರಜನಿಕಾಂತ್ ಪಡೆಯಪ್ಪ ಪಾರ್ಟ್-2 ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. 1999ರಲ್ಲಿ ತೆರೆಕಂಡ ಪಡೆಯಪ್ಪ ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದ ಸಿನಿಮಾ. ಈ ಸಿನಿಮಾದ ಕಥೆಯನ್ನ ಬರೆಯುವುದರ ಜೊತೆಗೆ ನಟನೆ ಮಾಡಿ, ನಿರ್ಮಾಣ ಕೂಡಾ ಮಾಡಿದ್ದರು ನಟ ರಜನಿಕಾಂತ್.
ಈ ಕಾರಣದಿಂದ ಪಡೆಯಪ್ಪ ಸಿನಿಮಾದ ಹಕ್ಕುಗಳನ್ನು ಯಾರಿಗೂ ಕೊಟ್ಟಿಲ್ಲ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಈಗಲೂ ರಜನಿಕಾಂತ್ ಅವರ ಬಳಿಯೇ ಇವೆ. ಸನ್ ಟಿವಿಗೆ ಕೇವಲ ಎರಡು ಬಾರಿ ಮಾತ್ರ ಪ್ರಸಾರಕ್ಕೆ ಅವಕಾಶ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈಗ 25 ವರ್ಷಗಳ ಬಳಿಕ ಈ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ ತಲೈವ. ಇನ್ನು ಈ ಸಿನಿಮಾದಲ್ಲಿ ಮೊದಲು ಐಶ್ವರ್ಯ ರೈ ಅವರನ್ನು ವಿಲನ್ ಪಾತ್ರದಲ್ಲಿ ನಟಿಸುವುದಕ್ಕೆ ಅಪ್ರೋಚ್ ಮಾಡಲಾಗಿತ್ತಂತೆ. ಅವರು ಒಪ್ಪದೇ ಇದ್ದಾಗ ರಮ್ಯಾಕೃಷ್ಣ ಅವರನ್ನ ಆ ಪಾತ್ರಕ್ಕಾಗಿ ಆಯ್ಕೆ ಮಾಡಲಾಯ್ತು ಎಂದಿದ್ದಾರೆ.
ಅಂದಹಾಗೆ ಐಶ್ವರ್ಯ ರೈ ಅವರ ಕಾಲ್‌ಶೀಟ್‌ಗಾಗಿ ಮೂರು ತಿಂಗಳು ಕಾದಿದ್ದರಂತೆ. ಆದರೆ ಐಶ್ವರ್ಯಾ ರೈ ಆ ಪಾತ್ರದಲ್ಲಿ ನಟಿಸುವುದಕ್ಕೆ ಆಸಕ್ತಿ ತೋರಿರಲಿಲ್ಲ. ಹೀಗಾಗಿ ನಿರ್ದೇಶಕ ಕೆ.ಎಸ್.ರವಿಕುಮಾರ್ ರಮ್ಯಾಕೃಷ್ಣ ಅವರನ್ನ ಆಯ್ಕೆ ಮಾಡಲಾಗಿತ್ತು. ರಜನಿಕಾಂತ್ ಅವರ 2.0 ಆಗಿದೆ, ಇದೀಗ ಜೈಲರ್-2 ಸಿನಿಮಾ ನಡೆಯುತ್ತಿದೆ ಎಂದಾಗ ಈ ವೇಳೆ ಪಡಯಪ್ಪ ಪಾರ್ಟ್-2 ಯಾಕ್ ಮಾಡಬಾರದು ಎನ್ನುವ ಯೋಚನೆ ಹೊಳೆದಿದೆಯಂತೆ. ಹೀಗಾಗಿ ಪಾರ್ಟ್-2 ಮಾಡುವ ಸುಳಿವನ್ನು ನೀಡಿದ್ದಾರೆ. ಇನ್ನು ಈ ಬಾರಿಯಾದರೂ ನೀಲಾಂಬರಿ ಪಾತ್ರಕ್ಕಾಗಿ ಐಶ್ವರ್ಯ ರೈ ಬರ್ತಾರಾ? ಪಡೆಯಪ್ಪ-2 ಚಿತ್ರದಲ್ಲಿ ನಟಿಸುತ್ತಾರಾ? ಇದೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Leave a Reply

Your email address will not be published. Required fields are marked *

error: Content is protected !!