ಉದಯವಾಹಿನಿ , ಬ್ಯಾಂಕಾಕ್: ಉತ್ತರ ಗೋವಾದಲ್ಲಿ ಸಂಭವಿಸಿದ್ದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ನೈಟ್‌ಕ್ಲಬ್ ಮಾಲೀಕರಾದ ಲೂಥ್ರಾ ಸಹೋದರರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ಬಂಧನದ ಬಳಿಕ ಗೌರವ್ ಲೂತ್ರಾ ಹಾಗೂ ಸೌರಭ್ ಲೂತ್ರಾ ಫೋಟೋ ವೈರಲ್ ಆಗಿದೆ. ಗೋವಾ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ ಬಳಿಕ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದು, ನಂತರ ಥಾಯ್ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ವಿದೇಶಾಂಗ ಸಚಿವಾಲಯಕ್ಕೆ ಕ್ರಮ ಕೈಗೊಳ್ಳುವಂತೆ ಗೋವಾ ಸರ್ಕಾರ ವಿನಂತಿಸಿದ ಬಳಿಕ ಲೂಥ್ರಾ ಸಹೋದರರಿಬ್ಬರ ಪಾಸ್‌ಪೋರ್ಟ್ ರದ್ದುಗೊಳಿಸಲಾಯಿತು. ಬಂಧನ ನಂತರ ಇಬ್ಬರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಶ್ರೀಘದಲ್ಲೇ ಬಂಧಿತರನ್ನು ಭಾರತಕ್ಕೆ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ. ಡಿ.6ರಂದು ಮಧ್ಯರಾತ್ರಿ ಉತ್ತರ ಗೋವಾದ ಅರ್ಪೋರಾ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಿಂದಾಗಿ 25 ಜನರು ಸಾವನ್ನಪ್ಪಿದ್ದರು. ಅಗ್ನಿ ಅವಘಡದ ವೇಳೆ ಲೂಥ್ರಾ ಸಹೋದರರು ಥೈಲ್ಯಾಂಡ್‌ಗೆ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಈವರೆಗೆ ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಲಾಗಿದ್ದು, ಗೋವಾ ಸರ್ಕಾರದ ಆದೇಶದಂತೆ ಲೂಥ್ರಾ ಸಹೋದರರ ಒಡೆತನದಲ್ಲಿದ್ದ ಇನ್ನೊಂದು ನೈಟ್‌ಕ್ಲಬ್‌ನ್ನು ನೆಲಸಮಗೊಳಿಸಲಾಗಿದೆ. ಇನ್ನೂ ಈಗಾಗಲೇ ಈ ಸಂಬಂಧ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿ, ಗೋವಾ ಸಿಎಂ ಆದೇಶಹೊರಡಿಸಿದ್ದಾರೆ
