ಉದಯವಾಹಿನಿ ,ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡುವ ಕಾನೂನು ಇಂದಿನಿಂದ ಜಾರಿಗೆ ಬಂದಿದೆ. ಈ ಮೂಲಕ, ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆ ಸಂಬಂಧ ಸಮಗ್ರ ಕಾನೂನು ರೂಪಿಸಿದ ಮೊದಲ ದೇಶವಾಗಿದೆ. ಈ ಕಾನೂನಿನ ಮೂಲಕ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಥ್ರೆಡ್ಸ್, ಸ್ಮ್ಯಾಪ್‌ಚಾಟ್, ಟಿಕ್‌ಟಾಕ್‌ ನಂತಹ ಸಾಮಾಜಿಕ ಜಾಲತಾಣಗಳ ವೇದಿಕೆಗಳು ಬಳಕೆದಾರರ ವಯಸ್ಸನ್ನ ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇಲ್ಲವಾದಲ್ಲಿ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾಗಿದೆ. ಮಕ್ಕಳ ಸುರಕ್ಷತೆ ಖಾತರಿಪಡಿಸಲು ಸಾಮಾಜಿಕ ಹೊಣೆಗಾರಿಕೆ ನಿಗದಿಪಡಿಸುವ ಉದ್ದೇಶ ಈ ಕಾನೂನಿನಲ್ಲಿದೆ ಅಂತ ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *

error: Content is protected !!