ಉದಯವಾಹಿನಿ, ಕರಾಚಿ: ಡಕಾಯಿತರ ಗುಂಪೊಂದು ರಾಕೆಟ್ ಲಾಂಚರ್ ಬಳಸಿ ದೇವಸ್ಥಾನದ ಮೇಲೆ ದಾಳಿ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಕಾಶ್ಮೋರ್ ಪ್ರದೇಶದಲ್ಲಿ ಹಿಂದೂಗಳ ಮನೆಗಳಿಗೆ ಹೊಂದಿಕೊಂಡಂತೆ ಇದ್ದ ದೇಗುಲದ ಮೇಲೆ ದಾಳಿ ನಡೆದಿದೆ.ಸ್ಥಳೀಯ ಹಿಂದೂ ಸಮುದಾಯದವರು ನಿರ್ಮಿಸಿದ ದೇವಾಲಯದ ಮೇಲೆ ದಾಳಿಕೋರರು ಭಾನುವಾರ ಮನಬಂದಂತೆ ಗುಂಡು ಹಾರಿಸಿದ್ದು, ಕಾಶ್ಮೋರ್- ಕಂಧ್‌ಕೋಟ್ ಎಸ್‌ಎಸ್‌ಪಿ ಇರ್ಫಾನ್ ಸಮ್ಮೋ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ದಾಳಿ ಸಂದರ್ಭ ದೇಗುಲ ಮುಚ್ಚಿತ್ತು. ಬಾಗ್ರಿ ಸಮುದಾಯವು ನಡೆಸುವ ಧಾರ್ಮಿಕ ಸೇವೆಗಳಿಗಾಗಿ ದೇವಾಲಯವನ್ನು ವಾರ್ಷಿಕವಾಗಿ ತೆರೆಯಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಜಾನೆ ದಾಳಿ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸುವ ಹೊತ್ತಿಗೆ ದಾಳಿಕೋರರು ಪರಾರಿಯಾಗಿದ್ದಾರೆ.ನಾವು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ’ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಟು ಅಥವಾ ಒಂಬತ್ತು ಮಂದಿ ದಾಳಿಯಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಅಂದಾಜಿಸಿದ್ದಾರೆ. ಡಕಾಯಿತರು ಹಾರಿಸಿದ ರಾಕೆಟ್ ಲಾಂಚರ್‌ಗಳು ಸ್ಫೋಟಗೊಳ್ಳಲು ವಿಫಲವಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಬಾಗ್ರಿ ಸಮುದಾಯದ ಸದಸ್ಯ ಡಾ.ಸುರೇಶ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!