
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ವ್ಯಾಪ್ತಿಗೆ ಬರುವ ಕರಿಂ ಸಾಬ್ ಲೇಔಟ್ನಲ್ಲಿ (ಶ್ರೀಗಂಧ ನಗರ) ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರು ಚಾಲನೆ ನೀಡಿದರು. ನಂತರ ಅವರು ಕಾಮಗಾರಿಗೆ ಗುಣಮಟ್ಟದ ಕಾಮಗಾರಿ ಆಗಬೇಕು ಮತ್ತು ಮಳೆಗಾಲ ಇರುವ ನಿಮಿತ್ತ ಸಾರ್ವಜನಿಕರಿಗೆ ಕಾಮಗಾರಿಯಿಂದ ಓಡಾಡಲು ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಇಂಜಿನಿಯರ್ಗಳಿಗೆ ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿ ಶಾಸಕ ಎಸ್ ಮುನಿರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಎಚ್ ಎನ್ ಗಂಗಾಧರ್, ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳ ವಾಟರ್, ಮಾಜಿ ಅಧ್ಯಕ್ಷ ನಾಗೇಶ್, ವೈ ಜಿ ನಾಗರಾಜ್, ಪ್ರದಾನ ಕಾರ್ಯದರ್ಶಿ ಮೋಹನ್ ಕುಮಾರ್, ಶ್ರೀಧರ್, ದಿನೇಶ್, ತಿಮ್ಮೇಗೌಡ, ರಾಮೇಗೌಡ,ಭಾರತ್, ಶ್ರೀನಿವಾಸ್, ಯೋಗೇಶ್, ಅಲ್ಪಸಂಖ್ಯಾತರ ಮುಖಂಡ ಅಮ್ಮಜದ್, ಉಸ್ಮಾನ್, ಇಬ್ರಾಹಿಂ, ಮುಖಂಡರು ಮಹಿಳೆಯರು ಕಾರ್ಯಕರ್ತರು ಮತ್ತು ಕರಿಂ ಸಾಬ್ ಲೇಔಟಿನ ಸಮಸ್ತ ನಾಗರಿಕರು ಇದ್ದರು.
