ಉದಯವಾಹಿನಿ, ಯಾವುದೇ ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗುವಾಗ ಈ ಚಿತ್ರ ಎಷ್ಟು ಮೈಲೇಜ್ ಪಡೆಯಬಹುದು, ಎಷ್ಟು ಗಳಿಕೆ ಮಾಡಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಹಾಕುತ್ತಾರೆ. ಈ ಲೆಕ್ಕಾಚಾರ ಕೆಲವೊಮ್ಮೆ ಉಲ್ಟಾ ಆಗಬಹುದು. ಹೆಚ್ಚು ಗಳಿಕೆ ಮಾಡುತ್ತವೆ ಎಂದು ವಿರಿಸಿದ ಸಿನಿಮಾಗಳು ಸೋತ ಉದಾಹರಣೆ ಇದೆ. ಅದೇ ರೀತಿ ಸಿನಿಮಾ ಫ್ಲಾಪ್ ಆಗುತ್ತದೆ ಎಂದು ಭವಿಷ್ಯ ನುಡಿದು ಚಿತ್ರಗಳು ಹಿಟ್ ಆಗಿದ್ದಿದೆ. ಇದಕ್ಕೆ ಉತ್ತಮ ಉದಾಹರಣೆ ರಣವೀರ್ ಸಿಂಗ್ ನಟನೆಯ ಧುರಂಧರ್ .
ಧುರಂಧರ್’ ಸಿನಿಮಾ ಯಾವುದೇ ಕಾರಣಕ್ಕೂ ಫ್ಲಾಪ್ ಆಗುತ್ತದೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ಚಿತ್ರ ನೆಗೆಟಿವಿಟಿ, ದೀರ್ಘ ರನ್ ಟೈಮ್ (3 ಗಂಟೆ 36 ನಿಮಿಷ) ಮಧ್ಯೆಯೂ ಯಶಸ್ಸು ಕಂಡಿದೆ. ಈ ಚಿತ್ರ ಕೇವಲ ಏಳು ದಿನಕ್ಕೆ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 200 ಕೋಟಿ ರೂಪಾಯಿ.

ಧುರಂಧರ್ ಸಿನಿಮಾ ಸಾಧಾರಣ ಓಪನಿಂಗ್ ಪಡೆಯಿತು. ಚಿತ್ರಕ್ಕೆ ಸಿಕ್ಕ ಪಾಸಿಟಿವ್ ವಿಮರ್ಶೆಗಳು ಚಿತ್ರಕ್ಕೆ ಸಹಕಾರಿ ಆದವು. ಆ ಬಳಿಕ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಹೋಗಿದೆ. ವಾರದ ದಿನವೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಮಂಗಳವಾರ, ಬುಧವಾರ ಹಾಗೂ ಗುರುವಾರ ಸಿನಿಮಾ ತಲಾ 27 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 208 ಕೋಟಿ ರೂಪಾಯಿ ಆಗಿದೆ.ತೆಲುಗಿನಲ್ಲಿ ‘ಅಖಂಡ 2’ ಹಾಗೂ ಕನ್ನಡದಲ್ಲಿ ದರ್ಶನ್ ನಟನೆಯ ‘ಡೆವಿಲ್ 2’ ಸಿನಿಮಾ ತೆರೆಗೆ ಬಂದಿದೆ. ಈ ಎರಡೂ ಸಿನಿಮಾಗಳು ‘ಧುರಂಧರ್’ ಚಿತ್ರಕ್ಕೆ ಟಫ್ ಫೈಟ್ ನೀಡುವ ಸಾಧ್ಯತೆ ಇದೆ. ಆದರೆ, ಈ ಎರಡು ಸಿನಿಮಾಗಳ ಎಫೆಕ್ಟ್ ಚಿತ್ರದ ಕಲೆಕ್ಷನ್ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ ಎಂಬುದು ವಿಶೇಷ.

Leave a Reply

Your email address will not be published. Required fields are marked *

error: Content is protected !!