ಉದಯವಾಹಿನಿ, ವಾಷಿಂಗ್ಟನ್​: ಲೈಂಗಿಕ ಅಪರಾಧಿ ಜೇಪ್ರಿ ಎಪ್ಸ್ಟೀನ್ ​ಜೊತೆಗೆ ಡೊನಾಲ್ಡ್ ಟ್ರಂಪ್, ಬಿಲ್ ಕ್ಲಿಂಟನ್ ಮತ್ತು ಮಾಜಿ ಪ್ರಿನ್ಸ್ ಆಂಡ್ರ್ಯೂ ಇರುವ ಕೆಲವು ಫೋಟೋಗಳನ್ನು ಹೌಸ್ ಡೆಮೋಕ್ರಾಟ್‌ಗಳು ಬಿಡುಗಡೆ ಮಾಡಿದ್ದಾರೆ.
ಹೌಸ್ ಓವರ್‌ಸೈಟ್ ಕಮಿಟಿಯಲ್ಲಿ ಡೆಮಾಕ್ರಟಿಕ್ ನಾಯಕರು ಆರಂಭದಲ್ಲಿ ಬಿಡುಗಡೆ ಮಾಡಿದ ಕೆಲವು ಫೋಟೋಗಳು, 2019ರಲ್ಲಿ ಲೈಂಗಿಕ ಅಪರಾಧ ಎದುರಿಸಿ ನಿಧನರಾದ ಎಪ್ಸ್ಟೀನ್ ಅವರ ಎಸ್ಟೇಟ್‌ನಿಂದ ಪಡೆದ 95,000ಕ್ಕೂ ಹೆಚ್ಚು ಫೋಟೋಗಳನ್ನು ಪಡೆಯಲಾಗಿದೆ. ಇದೀಗ ಬಿಡುಗಡೆಯಾಗಿರುವ ಫೋಟೋಗಳು ನ್ಯಾಯಾಂಗ ಇಲಾಖೆಗೆ ಒತ್ತಾಯಿಸಲಾಗಿದೆ.ಫೋಟೋಗಳನ್ನು ಶೀರ್ಷಿಕೆಗಳು ಅಥವಾ ಸಂದರ್ಭವಿಲ್ಲದೆ ಬಿಡುಗಡೆ ಮಾಡಲಾಗಿದ್ದು, ಟ್ರಂಪ್​ ಆರು ಮಹಿಳೆಯರೊಂದಿಗೆ ಇರುವ ಚಿತ್ರ ಬಿಡುಗಡೆ ಮಾಡಲಾಗಿದ್ದು, ಯುವತಿಯರೊಂದಿಗೆ ಇರುವ ಕೆಲವು ಚಿತ್ರಗಳಲ್ಲಿ ಕಪ್ಪು ಪಟ್ಟಿ ಹಾಕಲಾಗಿದೆೆ. ಹಲವು ಫೋಟೋಗಳು ಈಗಾಗಲೇ ಸಾರ್ವಜನಿಕವಾಗಿ ಪ್ರಸಾರವಾಗಿವೆ.ಈ ಫೋಟೋ ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ಅಧ್ಯಕ್ಷ ಟ್ರಂಪ್​, ಎಪ್ಸ್ಟೀನ್​ ಅವರ ಫೋಟೋವನ್ನು ನಾನು ನೋಡಿಲ್ಲ. ಇದು ಯಾವುದೇ ದೊಡ್ಡ ವಿಷಯವಲ್ಲ ಎಂದಿದ್ದಾರೆ. ಎಪ್ಸ್ಟೀನ್ ಪಾಮ್ ಬೀಚ್‌ನಾದ್ಯಂತ ಇದ್ದು, ಎಲ್ಲರೊಂದಿಗೆ ಫೋಟೋಗಳನ್ನು ತೆಗೆದುಕೊಂಡಿದ್ದಾನೆ ಎಂದಿದ್ದಾರೆ.ಹೌಸ್ ಓವರ್‌ಸೈಟ್ ಸಮಿತಿಯ ಉನ್ನತ ಡೆಮೋಕ್ರಾಟ್ ಪ್ರತಿನಿಧಿ ರಾಬರ್ಟ್ ಗಾರ್ಸಿಯಾ ಮಾತನಾಡಿ, ಯಾವುದೇ ಫೋಟೋ, ಯಾವುದೇ ರೀತಿಯ ಹಾನಿಗೆ ಕಾರಣವಾಗುವ ಯಾವುದೇ ಮಾಹಿತಿಯನ್ನು ಪರಿಷ್ಕರಿಸುವುದಾಗಿ ತಿಳಿಸಿದ್ದಾರೆ.
ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ಮಾತನಾಡಿ, ಡೆಮೋಕ್ರಾಟ್‌ಗಳು ಸುಳ್ಳು ನಿರೂಪಣೆ ಮಾಡುವ ಉದ್ದೆಶದಿಂದ ಈ ಫೋಟೋಗಳನ್ನು ಸುಖಾಸುಮ್ಮನೆ ಬಿಡುಗಡೆ ಮಾಡಿದ್ದಾರೆ. ಇದು ಟ್ರಂಪ್​ ವಿರುದ್ಧದ ಡೆಮೋಕ್ರಾಟ್​ ವಂಚನೆಯ ಭಾಗವಾಗಿದೆ ಎಂದು ಜರಿದಿದ್ದಾರೆ.
ಈ ಹಿಂದೆ ರಿಪಬ್ಲಿಕನ್​ ಆಡಳಿತದಲ್ಲಿದ್ದಾಗ ಎಪ್ಸ್ಟೀನ್ ತನಿಖೆಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದರಿಂದ ಟ್ರಂಪ್​ ಆಡಳಿತದ ಮೇಲೆ ಒತ್ತಡ ಹೇರಲು ಡೆಮೋಕ್ರಾಟ್‌ಗಳು ಮುಂದಿನ ದಿನಗಳಲ್ಲಿ ಫೋಟೋಗಳನ್ನು ಬಿಡುಗಡೆ ಮಾಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಎಪ್ಸ್ಟೀನ್ ಅವರ ಎಸ್ಟೇಟ್‌ನಿಂದ ಪಡೆದ ಚಿತ್ರಗಳಲ್ಲಿ ಸುಮಾರು ಕಾಲು ಭಾಗದಷ್ಟು ಚಿತ್ರಗಳನ್ನು ತಮ್ಮ ಸಿಬ್ಬಂದಿ ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ.ಸತ್ಯ ಹೊರಬರಲು ಮತ್ತು ಬದುಕುಳಿದವರಿಗೆ ನ್ಯಾಯ ಸಿಗುವಂತೆ ಮಾಡಲು ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದ ಸಾರ್ವಜನಿಕರಿಗೆ ಫೈಲ್‌ಗಳನ್ನು ಬಿಡುಗಡೆ ಮಾಡಬೇಕಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!