ಉದಯವಾಹಿನಿ, ವಡೋದರಾ: ಗುಜರಾತ್‌ನ ವಡೋದರಾದಲ್ಲಿರುವ ವಿಶ್ವವಿದ್ಯಾನಿಲಯವೊಂದು ಸಮಾಜಶಾಸ್ತ್ರ ಪಠ್ಯಕ್ರಮದಲ್ಲಿ ಮೋದಿ ತತ್ತ್ವ ಹಾಗೂ ಆರೆಸ್ಸೆಸ್ ಇತಿಹಾಸವನ್ನು ಅಳವಡಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ “ವರ್ಚಸ್ವಿ ನಾಯಕತ್ವ” ಮತ್ತು ಆರೆಸ್ಸೆಸ್‌ ಇತಿಹಾಸವನ್ನು ಒಳಗೊಂಡಿರುವ ಈ ಪಠ್ಯಕ್ರಮವು ಸಮಾಜದ ಮೇಲೆ ಅವುಗಳ ಪರಿಣಾಮವನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಡೋದರದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೀರೇಂದ್ರ ಸಿಂಗ್ ಅವರ ಪ್ರಕಾರ, ಮಹಾರಾಜ ಸಯಾಜಿರಾವ್ ಸರಕಾರಿ ವಿವಿಯಲ್ಲಿ 2 ವರ್ಷದ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ “Sociology of Patriotism” ಎಂಬ ಹೊಸ ಹೊಸ ಕೋರ್ಸ್ ಅನ್ನು ಪರಿಚಯಿಸಲಾಗಿದೆ. ಈ ಪಠ್ಯಕ್ರಮದ ಉದ್ದೇಶ “ಮೋದಿ ತತ್ತ”ವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದರ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಸಯಾಜಿರಾವ್ ಗಾಯಕ್ವಾಡ್ ॥ ಮುಂತಾದ ಸಮಾಜ ಸುಧಾರಕರ ಕಾರ್ಯಗಳನ್ನು ಅಧ್ಯಯನ ಮಾಡುವುದು ಎಂದು ತಿಳಿಸಿದ್ದಾರೆ.

“ನೀವು ಇಷ್ಟಪಡುತ್ತೀರೋ ಇಲ್ಲವೋ, ನೀವು ರಾಜಕೀಯ ಕ್ಷೇತ್ರದಲ್ಲಿ ಮತ್ತು ನಾಯಕತ್ವದ ಪಾತ್ರದಲ್ಲಿ ಪ್ರಧಾನಿ ಮೋದಿಯವರ ಬಗ್ಗೆ ಚರ್ಚಿಸಬೇಕಾಗುತ್ತದೆ. ಅದು ದೀರ್ಘಕಾಲ ಉಳಿಯುವ ಅಂಶ. ಸಮಾಜಶಾಸ್ತ್ರಜ್ಞ ಮ್ಯಾಕ್ಸ್‌ ವೆಬರ್ ಅವರ ವರ್ಚಸ್ವಿ ನಾಯಕತ್ವವನ್ನು ನಾವು ಅಧ್ಯಯನ ಮಾಡಲು ಬಯಸಿದ್ದೇವೆ. ಅದನ್ನು ಮಹಾತ್ಮಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರಲ್ಲಿ ಕಂಡಿದ್ದೇವೆ. ಪ್ರಧಾನಿ ಮೋದಿಯವರಲ್ಲಿಯೂ ಅದೇ ರೀತಿಯ ವರ್ಚಸ್ವಿ ನಾಯಕತ್ವ ಕಂಡುಬರುತ್ತದೆ. ಅದು ವೈಜ್ಞಾನಿಕ ವಿಷಯವಾಗಿದ್ದು ಅಧ್ಯಯನಕ್ಕೆ ಒಳಪಡಬೇಕಾಗಿದೆ” ಎಂದು ವೀರೇಂದ್ರ ಸಿಂಗ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!