
ಉದಯವಾಹಿನಿ, ತಿರುವನಂತಪುರ : ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗದ ಹೀನಾಯ ಸೋಲು ಕಾರ್ಯಕರ್ತ ಬಾಬು ವರ್ಗೀಸ್ ಎಂಬವವರಿಗೆ ಅಪಾರ ದುಃಖ ತಂದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನಂತರ ಅವರು ತಮ್ಮ ಟ್ರೇಡ್‌ಮಾರ್ಕ್ ಮೀಸೆಯನ್ನು ಬೋಳಿಸಿಕೊಂಡರು. ಮೀಸೆ ಬೋಳಿಕೊಳ್ಳುತ್ತಿರುವುದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪಟ್ಟಣಂತಿಟ್ಟ ಪುರಸಭೆ ಚುನಾವಣೆಗೂ ಮುನ್ನ ವರ್ಗೀಸ್ ಎಡಪಕ್ಷಗಳು ಈ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ವಿಫಲವಾದರೆ ತಮ್ಮ ಮೀಸೆಯನ್ನು ಬೋಳಿಸಿಕೊಳ್ಳುವುದಾಗಿ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದರು. ಶನಿವಾರ ಎಣಿಕೆಯಾದ ಫಲಿತಾಂಶ, ಪತ್ತನಂತಿಟ್ಟ ಪುರಸಭೆಯಲ್ಲಿ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಎಲ್‌ಡಿಎಫ್‌ಗೆ ದೊಡ್ಡ ಹೊಡೆತ ಬಿದ್ದರುವುದು ಸ್ಪಷ್ಟವಾಯಿತು.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್ (ಯುಡಿಎಫ್) ಜಿಲ್ಲೆಯ ಪತ್ತನಂತಿಟ್ಟ, ತಿರುವಲ್ಲಾ ಮತ್ತು ಪಂದಳ ಸೇರಿದಂತೆ ನಾಲ್ಕು ಪುರಸಭೆಗಳಲ್ಲಿ ಮೂರನ್ನು ಗೆದ್ದುಕೊಂಡಿತು. ಈ ಮೂರರಲ್ಲಿ, ಪತ್ತನಂತಿಟ್ಟ ಮತ್ತು ತಿರುವಲ್ಲಾವನ್ನು ಈ ಹಿಂದೆ ಎಡಪಕ್ಷಗಳು ಹೊಂದಿದ್ದವು. ಅದು ಅಡೂರ್ ಅನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
