
ಉದಯವಾಹಿನಿ,
: ಪಟ್ಟಣದ ಚಂದಾಪೂರದ ತಾಲ್ಲೂಕಾ ಪಂಚಾಯತ್ ಕಛೇರಿ ಎದುರು ರಾಷ್ಟ್ರೀಯ ಮೂಲನಿವಾಸಿ ಬಹುಜನ ಮಹಿಳಾ ಸಂಘ,ಬಹುಜನ ವಿಧ್ಯಾರ್ಥಿ ಫೆಡ್ರೇಶನ ಇಕ್ವಾಲಿಟಿ ಸಂಘಟನೆ,ಜಿಲ್ಲಾ ಸಮಿತಿ,ಜಂಟಿ ಸಂಘಟನೆಗಳ ಒಕ್ಕೂಟ ವತಿಯಿಂದ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಪ್ರತಿಭಟನೆ ನಡೆಸಿ ತಾಲ್ಲೂಕಾ ದಂಡಾಧಿಕಾರಿ ತಹಸೀಲ್ದಾರ್ ಹಾಗೂ ತಾಪಂ ಇಓ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹೋರಾಟಗಾರ ಮಾರುತಿ ಗಂಜಗಿರಿ ರೋಡ ಕಲ್ಲೂರ ಗ್ರಾಮದ ದಲಿತರ ಕಾಲೋನಿಯಲ್ಲಿರುವ ಮಹಿಳಾ ಶೌಚಾಲಯವನ್ನು ನೆಲಸಮಗೊಳಿಸಿದ್ದು ಅವರ ಮೇಲೆ ಕ್ರಮಕೈಗೊಂಡು ಪುನಃ ಶೌಚಾಲಯ ನಿರ್ಮಾಣ ಮಾಡಬೇಕು,ಕುಂಚಾವರಂ,ವೆಂಕಟಪೂರ,ಪಸ್ತಾಪುರ,ಗಡಿಕೇಶ್ವಾರ,ಚಿಮ್ಮನಚೋಡ, ಗ್ರಾಮಗಳಿಗೆ ವಿಧ್ಯಾರ್ಥಿಗಳಿಗೆ ಅನೂಕೂಲವಾಗುವಂತೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಡೇಕು,ಕನಕಪುರ ಗ್ರಾಪಂನಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ ಆಗಿದ್ದು ತನಿಖೆ ನಡೆಸಬೇಕು,ಕಲ್ಲೂರ ಗ್ರಾಮದ ಗೈರಾಣಿ ಜಮೀನಿನಲ್ಲಿ ದಲಿತರಿಗೆ ರುದ್ರಭೂಮಿ ಒದಗಿಸಬೇಕು,ಗಾರಂಪಳ್ಳಿ ಗ್ರಾಮದ ದಲಿತ ಓಣಿಯಲ್ಲಿ ಹೈಮಾಸ್ಟ್ ದ್ವೀಪ ಅಳವಡಿಸಿ ಅಂಬೇಡ್ಕರ್ ನಾಮಫಲಕ ಎದುರು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು,ತಾಡಪಳ್ಳಿ ಗ್ರಾಮದಲ್ಲಿ ರೇಷನ್ ವಿತರಿಸಬೇಕು,ದೇಗಲಮಡಿ ಗ್ರಾಮದಿಂದ ಹೋಸಳ್ಳಿಗೆ ಹೋಗುವ ರಸ್ತೆ ಡಾಂಬರಿಕರಣ ರಸ್ತೆ ನಿರ್ಮಿಸಬೇಕು,ಕೋಳ್ಳೂರ,ಐನೋಳ್ಳಿ,ಮಿರಿಯಾಣ,ಕುಪನೂರ,ಐನಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆ ಕಾಮಗಾರಿ ತನಿಖೆ ಮಾಡಬೇಕು, ದೇಗಲಮಡಿ ಗ್ರಾಮದಲ್ಲಿ ಆಕ್ರಮ ಸಾರಾಯಿ ಮಾರಾಟ ನಿಷೇಧಿಸಬೇಕು, ತಾಲ್ಲೂಕಿನಾದ್ಯಂತ ಆಕ್ರಮ ಮರಳು ತಡೆಗಟ್ಟಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೋಪಾಲ ಗಾರಂಪಳ್ಳಿ,ಮೌನೇಶ ಗಾರಂಪಳ್ಳಿ,ಮೋಹನ್ ಐನಾಪುರ,ಸುಭಾಷ್ ತಾಡಪಳ್ಳಿ,ವಿಜಯ,ಶಾಮರಾವ,ಗಮ್ಮು ರಾಠೋಡ್,ಮಾರುತಿ,ಗುರುನಾಥ,ಸುಭಾಷ್ ಖಾನಾಪುರ,ಮರೇಮ್ಮ,ಸಾಗರ ಹೋಸಳ್ಳಿ, ಶಿವರಾಜಕುಮಾರ ದೇಗಲಮಡಿ,ಶ್ರೀಕಾಂತ ದೇಗಲಮಡಿ, ಮಂಜುಳಾ,ಶರಣಮ್ಮ,ಶಿವಲಿಲಾ,ಸುನೀತಾ,ಸಂಗೀತ,ಕವಿತಾ,ರತ್ನಮ್ಮ, ಮಲ್ಲಮ್ಮ,ಲಕ್ಷ್ಮಿ, ಮಹೇಶ ದೇಗಲಮಡಿ,ಪವನ,ಕಾಶಿನಾಥ,ಅಜಯಕುಮಾರ, ಅನೇಕರಿದ್ದರು.
