ಉದಯವಾಹಿನಿ, ಕುಶಾಲನಗರ : ಕರ್ನಾಟಕ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಕುಶಾಲನಗರ‌‌ ವತಿಯಿಂದ ಸಮೀಪದ ರಸಲ್ ಪುರ ಕಾವೇರಿ ನದಿದಂಡೆಯಂಚಿನಲ್ಲಿ ವನ‌ ಮಹೋತ್ಸವ ಹಾಗೂ ಗೋ ಗ್ರೀನ್ ಅಭಿಯಾನದಡಿ ವಿವಿಧ 600 ಅರಣ್ಯ ಸಸಿಗಳನ್ನು ನೆಡುವ ಪರಿಸರ ಕಾರ್ಯಕ್ರಮದಲ್ಲಿ “ನದಿ ಪಾತ್ರದಲ್ಲಿ ಹಸಿರು ಪರಿಸರ ನಿರ್ಮಾಣ” ದ ಮಹತ್ವ ಕುರಿತು ಮಾತನಾಡಿದರು. ನದಿಯ ದಂಡೆಗುಂಟ ಬೆಳೆಸುವ ಮರಗಿಡಗಳು ನದಿಯಲ್ಲಿ ನೀರಿನ ಹರಿವನ್ನು ಹೆಚ್ಚಿಸಿ, ವರ್ಷವಿಡೀ ನೀರಿರುವಂತೆ ಮಾಡಬಲ್ಲದು. ದೇಶದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಶನ್’ ಸಂಸ್ಥೆ (ಐಸಿಎಫ್‍ಆರ್‌ಇ)ಯು ದೇಶದ ನದಿಗಳ ಎರಡು ದಂಡೆಯಲ್ಲೂ ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ನದಿಗಳಲ್ಲಿ ವರ್ಷವಿಡೀ ತಕ್ಕಮಟ್ಟಿಗೆ ನೀರಿರುವಂತೆ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು 2015 ರಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂ ದರು.
ಕುಶಾಲನಗರ‌‌ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಮಾತನಾಡಿ, ಅರಣ್ಯ ಇಲಾಖೆಯ ವತಿಯಿಂದ ನಾಗರಿಕರ ಸಹಭಾಗಿತ್ವದಲ್ಲಿ ಶಾಲಾ- ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 2500 ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಹಲಸು, ನೇರಳೆ, ಹೊಳೆ ಮಾವು, ಕಿರಾಲು ಬೋಗಿ, ಪೈಸೆ, ಹೊಳೆಮತ್ತಿ ಹಾಗೂ ಕೂಳಿ ಜಾತಿಯ ಗಿಡಗಳನ್ನು ನೆಡಲಾಯಿತು ಎಂದು ತಿಳಿಸಿದರು. ಕಾವೇರಿ ಪರಿಸರ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್    ಗುಡ್ಡೆಹೊಸೂರು ಗ್ರಾ.ಪಂ.ಸದಸ್ಯ ಲಕ್ಷ್ಮಣ್, ಡಿ ಆರ್ ಎಫ್ ಓ ಕೆ.ಎನ್.ದೇವಯ್ಯ, ಶ್ರವಣಕುಮಾರ್ ವಿಭೂತಿ, ಚೇತನ್, ಗಸ್ತು ವನ ಪಾಲಕ ವಿ.ಎಸ್. ಮಂಜೇಗೌಡ, ಸಿದ್ದರಾಮ ನಾಟೀಕರ್, ದಿನೇಶ್,ಎನ್ನೆಸ್ಸೆಸ್ ಹಾಗೂ ಇಕೋ ಕ್ಲಬ್ ಘಟಕದ ವಿದ್ಯಾರ್ಥಿಗಳು, ಅರಣ್ಯ ವೀಕ್ಷಕರು, ಗ್ರಾಮಸ್ಥರು
ಹಾಗೂ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!