ಉದಯವಾಹಿನಿ, : ತಾಲ್ಲೂಕಿನ ದೇಗಲಮಡಿ ಆಶ್ರಮದ ಪರಮಪೂಜ್ಯ ಡಾ.ಬಸವಲಿಂಗ ಅವಧೂತ ಮಹಾಸ್ವಾಮಿಗಳ 47ನೇ ಜನ್ಮದಿನವನ್ನು ಪೂಜ್ಯರ ಪಾದ ಪೂಜೆಯೊಂದಿಗೆ 47 ವಿವಿಧ ಬಗೆಯ ಸಸಿಗಳು ನೆಡುವುದರ ಮೂಲಕ ಆಚರಣೆ ಮಾಡಲಾಯಿತು.
ಪೂಜ್ಯರ ಹುಟ್ಟುಹಬ್ಬದ ಅಂಗವಾಗಿ 47 ಸಸಿ ನೆಡುವ ಕಾರ್ಯಕ್ರಮವನ್ನು ಪೂಜ್ಯ ಡಾ.ಬಸವಲಿಂಗ ಅವಧೂತರು ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು ಈಗಿನ ಸಮಾಜದಲ್ಲಿ ಹುಟ್ಟುಹಬ್ಬದ ಅಂಗವಾಗಿ ಅನೇಕರು ಕೇಕ್ ಕತ್ತರಿಸುವುದು,ಮೋಜುಮಸ್ತಿ ಮಾಡಿ ಸಾಲಸೂಲ ಮಾಡಿಕೊಂಡು ದುಂದುವೆಚ್ಚ ಮಾಡಿಕೊಳ್ಳುವುದು ತಪ್ಪಿಸಿ ಪ್ರತಿಯೋಬ್ಬರ ಹುಟ್ಟುಹಬ್ಬದ ದಿನದಂದು ಒಂದು ಒಂದು ಸಸಿ ನೆಟ್ಟು ಪೋಷಣೆ ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ.
ಇದರಿಂದ ಉತ್ತಮ ಗಾಳಿ ಮಳೆ ಆಮ್ಲಜನಕ ಸಿಗುತ್ತದೆ,ಒಂದು ಮರ ಕಡಿದರೆ ಅದರ ಪಕ್ಕ ಇನ್ನೋಂದು ಮರ ನೆಟ್ಟು ಪೋಷಣೆ ಮಾಡಬೇಕು ಎಂದರು.
ಮಠದ ಭಕ್ತ ಲಕ್ಷ್ಮಣ ಆವುಂಟಿ ಮಾತನಾಡಿ ದೇಗಲಮಡಿ ಆಶ್ರಮದ ಡಾ.ಬಸವಲಿಂಗ ಅವಧೂತರು ಈ ಭಾಗದ ನಡೆದಾಡುವ ದೇವರು,ಮಹಾತಪಸ್ವಿಗಳು ,ಅಪಾರ ಭಕ್ತಸಮೋಹ ಹೊಂದಿ ಕರ್ನಾಟಕ ಅಲ್ಲದೆ ನೆರೆಯ ತೆಲಂಗಾಣ,ಆಂದ್ರಪ್ರದೇಶ,ಮಹಾರಾಷ್ಟ್ರ,ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರ ಆರಾದ್ಯ ದೇವರ ಹುಟ್ಟುಹಬ್ಬದ ಅಂಗವಾಗಿ ಮಠದ ಭಕ್ತ ಸಮೋಹದಿಂದ ದೇಗಲಮಡಿ ಆಶ್ರಮದಲ್ಲಿ ವಿವಿಧ ಬಗೆಯ 47 ಸಸಿಗಳು ನೆಟ್ಟು ಹುಟ್ಟುಹಬ್ಬ ಆಚರಿಸುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಶಿವುಸ್ವಾಮಿ,ಉದಯಕುಮಾರ ಗುತ್ತೇದಾರ,ಶಾಮರಾವ,ಸಂತೋಷ,ಸಾವಿರಾರು ಭಕ್ತರು ಹಾಜರಾಗಿ ಪೂಜ್ಯರ ಆಶಿರ್ವಾದ ಪಡೆದರು.

Leave a Reply

Your email address will not be published. Required fields are marked *

error: Content is protected !!