ಉದಯವಾಹಿನಿ, ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ(India ನಡುವಿನ ಮೂರನೇ ಟಿ20 ಪಂದ್ಯಕ್ಕೆ ಭಾರತ ಎರಡು ಬದಲಾವಣೆಯೊಂದಿಗೆ ಆಡಲಿಳಿಯಿತು. ವೇಗಿ ಜಸ್ಪ್ರೀತ್ ಬುಮ್ರಾಮತ್ತು ಆಲ್‌ರೌಂಡರ್ ಅಕ್ಷರ್ ಪಟೇಲ್ ಲಭ್ಯವಿರಲಿಲ್ಲ.ಟಾಸ್ ಸಮಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ವೈಯಕ್ತಿಕ ಕಾರಣಗಳಿಂದ ಬುಮ್ರಾ ಆಯ್ಕೆಗೆ ಲಭ್ಯವಿಲ್ಲ ಎಂದು ದೃಢಪಡಿಸಿದರು, ಆದರೆ ಅಕ್ಷರ್ ಪಟೇಲ್ ಅನಾರೋಗ್ಯದ ಕಾರಣ ಪಂದ್ಯದಿಂದ ಹೊರಗುಳಿದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಂತರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಬುಮ್ರಾ ಮುಂಬೈಗೆ ಮರಳಿದ್ದಾರೆ ಎಂದು ದೃಢಪಡಿಸಿತು. ಸರಣಿಯ ಉಳಿದ ಪಂದ್ಯಗಳಿಗೆ ವೇಗದ ಬೌಲರ್ ಲಭ್ಯರಿರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾಲ್ಕನೇ ಮತ್ತು ಐದನೇ ಟಿ20ಐಗಳು ಕ್ರಮವಾಗಿ ಡಿಸೆಂಬರ್ 17 ಮತ್ತು 19 ರಂದು ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ.
“ಜಸ್ಪ್ರೀತ್ ಬುಮ್ರಾ ವೈಯಕ್ತಿಕ ಕಾರಣಗಳಿಂದ ಮನೆಗೆ ಮರಳಿದ್ದಾರೆ ಮತ್ತು ಪಂದ್ಯಕ್ಕೆ ಅಲಭ್ಯರಾಗಿರುತ್ತಾರೆ. ಉಳಿದ ಪಂದ್ಯಗಳಿಗೆ ಅವರು ತಂಡವನ್ನು ಸೇರುವ ಬಗ್ಗೆ ಸರಿಯಾದ ಸಮಯದಲ್ಲಿ ಮಾಹಿತಿ ನೀಡಲಾಗುವುದು” ಎಂದು ಬಿಸಿಸಿಐ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!