ಉದಯವಾಹಿನಿ, ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿಂದು ಏರ್ಪೋರ್ಟ್ ವಿಚಾರಕ್ಕೆ 3 ಜನ ಸಚಿವರ ನಡುವೆ ವಾಗ್ವಾದ ನಡೆಯಿತು.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ತಿಪ್ಪಣ್ಣಪ್ಪ ಕಮಕನೂರು ಪ್ರಶ್ನೆ ಕೇಳಿದ್ರು. ಬೆಂಗಳೂರು-ಕಲುಬುರ್ಗಿ ವಿಮಾನ ಸಂಚಾರ ರದ್ದು ಮಾಡಲಾಗಿದೆ. 700 ಎಕರೆ ಜಾಗದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಲಾಗಿದೆ. ಪ್ರಯಾಣಿಕರು ಇಲ್ಲ ಅಂತ ವಿಮಾನಯಾನ ರದ್ದು ಮಾಡೋದು ಸರಿಯಲ್ಲ. ಮತ್ತೆ ವಿಮಾನಯಾನ ಸೇವೆ ಪುನರ್ ಪ್ರಾರಂಭ ಮಾಡಬೇಕು. ವಿಮಾನಯಾನ ಸೇವೆ ನಮಗೆ ಅವಶ್ಯಕತೆ ಇತ್ತು. ಪುನರ್ ಸೇವೆ ಕೊಡಬೇಕು ಅಂತ ಆಗ್ರಹ ಮಾಡಿದ್ರು. ಎಂ.ಬಿ ಪಾಟೀಲ್ ಉತ್ತರಕ್ಕೆ ಸಚಿವ ಶಿವಾನಂದ್ ಪಾಟೀಲ್ ವಿರೋಧಿಸಿದರು. ಬೀದರಿನಲ್ಲೂ ವಿಮಾನ ಯಾನ ಆರಂಭ ಆಗ್ತಿದೆ. ಉಡಾನ್ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೀರಾ? ಯಾರಿಗೆ ಮಾತಾಡಿ ವಿಮಾನ ಯಾನ ಆರಂಭಿಸ್ತಾ ಇದ್ದೀರಿ ಎಂದು ಶಿವಾನಂದ ಪಾಟೀಲ್ ಪ್ರಶ್ನಿಸಿದರು. ಎಂ.ಬಿ ಪಾಟಿಲ್ ಉತ್ತರ ಕೊಡುವ ಮೊದಲು ಎದ್ದು ನಿಂತ ಈಶ್ವರ್ ಖಂಡ್ರೆ, ನಾವು ಅಲ್ಲಿ ಕಲ್ಯಾಣ ಕರ್ನಾಟಕ ನಿಧಿ ಅಡಿ ನಿಲ್ದಾಣ ಮಾಡಿದ್ದೇವೆ ಎಂದರು.
