ಉದಯವಾಹಿನಿ, ಕೆ.ಆರ್.ಪೇಟೆ : ವಿಶ್ವ ಕನ್ನಡ ಜಾನಪದ ಪರಿಷತ್ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವರಿಗೆ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು.
ಕನ್ನಡ ಮತ್ತು ಸಂಸ್ಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ ೧೩ ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಹಲವಾರು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ರಕ್ಷಿತಾ ಭರತಕುಮಾರ ಈಟಿ ಸಾಧನೆ ಮಾಡುವುದು ಸುಲಭದ ಮಾತಲ್ಲ ನಿರಂತರ ಪರಿಶ್ರಮ, ಶ್ರದ್ದೆ, ಆಸಕ್ತಿ, ಸತತ ಪ್ರಯತ್ನ ಮುಂತಾ
ದುವುಗಳನ್ನು ಹಗಲಿರುಳು ಓರೆಗೆ ಹಚ್ಚಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಇಂದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ವಿವಿಧ ಭಾಗಗಳ ಸಾಧಕರನ್ನು ಗುರುತಿಸಿ ಅವರಿಗೆ ಗೌರವ ನೀಡುವ ಕೆಲಸ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಪ್ರಶಸ್ತಿ ಪ್ರಧಾನದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಸ್. ಮಂಜು ಮಾತನಾಡಿ ವಿಶ್ವ ಕನ್ನಡ ಜಾನಪದ ಪರಿಷತ್ ಪ್ರತೀ ವರ್ಷವೂ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ನಿರ್ವಹಿಸುತ್ತಾ ಬಂದಿದ್ದು ಅದರಂತೆ ಈ ಬಾರಿಯೂ ಶಿಕ್ಷಣ, ಸಾಹಿತ್ಯ, ಕಂದಾಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ತಾಲ್ಲೂಕಿನ ಗುರುರಂಗ, ಸ್ವಾಮಾಚಾರಿ, ಜೆ.ಬಿ.ನಾಗರಾಜು, ಜೆ.ಸೋಮಶೇಖರ, ಸಿ.ಎಸ್.ವೆಂಕಟೇಶ, ಎಂ.ಜಿ.ದೇವೇಗೌಡ, ಶಿವಕುಮಾರ, ಬಿ,ಎಸ್.ಮಹೇಶ್, ಹೆಚ್.ಪಿ.ಮಂಜುನಾಥ್, ಹೆಚ್.ಜಿ.ಅನಂತ, ಕೆ.ಆರ್.ಸವಿತ, ಶೈಲಜ, ಕೆ.ವಿ.ಪ್ರಕಾಶ ಸೇರಿದಂತೆ ಹಲವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿರುವುದು ಸಂತಸ ತಂದಿದೆ. ಅವರ ಈ ಸೇವೆ ಅವಿರತವಾಗಿ ಮುಂದುವರಿಯಲಿ ಎಂದು ಶುಭಕೋರಿದರು.
ಇದೇ ಸಂದರ್ಭದಲ್ಲಿ ಸಮಾಜಸೇವಕ ನಟರಾಜು, ಶ್ರೀಕಾಂತ್ ಚಿಮ್ಮಲ್, ದೀಪ ಪ್ರಜ್ವಲನೆ, ಮಂಜುಳನಾರಾಯಣ,ಅಯೂಬ್, ಪ್ರಶಾಂತರಜಪೂತ, ವಿದೂಷಿ ಸುಭ್ರತಾ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.
