ಉದಯವಾಹಿನಿ, ಟೀಮ್‌ ಇಂಡಿಯಾ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ವರ್ತನೆಯಿಂದ ಸಿಟ್ಟಿಗೆದ್ದು, ಎಚ್ಚರಿಕೆ ನೀಡಿ ತಾಳ್ಮೆ ಕಳೆದುಕೊಂಡು ಫೋನ್ ಕಸಿದುಕೊಂಡ ಘಟನೆ ಸಂಭವಿಸಿದೆ. ಈ ವಿಡಿಯೊ ವೈರಲ್‌ ಆಗಿದ್ದು ನೆಟ್ಟಿಗರು ಅಭಿಮಾನಿಯ ವರ್ತನೆಯನ್ನು ಟೀಕಿಸಿದ್ದಾರೆ.ಬುಮ್ರಾ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಭಾಗವಾಗಿದ್ದಾರೆ. ಅವರು ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಮೂರನೇ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.ವೈರಲ್‌ ವಿಡಿಯೊದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ವಿಡಿಯೊ ಮಾಡುತ್ತಾ ತಾನು ನಿಮ್ಮೊಂದಿಗೆ ಪ್ರಯಾಣಿಸುತ್ತೇನೆ ಎಂದು ಹೇಳಿದಾಗ ಬುಮ್ರಾ ನಿಮ್ಮ ಫೋನ್ ಬಿದ್ದರೆ, ನನ್ನನ್ನು ಕೇಳಬಾರದು ಎನ್ನುತಾರೆ. ಆಗ ಅಭಿಮಾನಿ ಪರವಾಗಿಲ್ಲ ಸರ್ ಎನ್ನುತ್ತಾನೆ. ತಾಳ್ಮೆ ಕಳೆದುಕೊಂಡ ಬುಮ್ರಾ ನಿಲ್ಲಿಸು ಸಾಕು ಎಂದು ಮೊಬೈಲ್‌ ಕಸಿದುಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ಕ್ಲಿಪ್ ಥಟ್ಟನೆ ಕೊನೆಗೊಂಡಿತು.

ಈ ಹಿಂದೆಯೂ ಜಸ್‌ಪ್ರೀತ್‌ ಬುಮ್ರಾ ತಾಳ್ಮೆ ಕಳೆದುಕೊಂಡಿದ್ದ ಘಟನೆ ನೆಡೆದಿತ್ತು. ಪಾಪರಾಜಿಗಳು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಕಿರಿಕಿರಿ ಉಂಟುಮಾಡಿದ್ದ ವೇಳೆ ತಾಳ್ಮೆ ಬುಮ್ರಾ ತಾಳ್ಮೆ ಕಳೆದುಕೊಂಡು ‘ನಾನು ನಿಮ್ಮನ್ನು ಬರಲು ಹೇಳಿಲ್ಲ’ ಎಂದು ಏರು ಧ್ವನಿಯಲ್ಲಿ ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಕ್ರಿಕೆಟ್ ಪಿಚ್‌ನಲ್ಲಿ ವಿರಳವಾಗಿ ತಾಳ್ಮೆ ಕಳೆದುಕೊಳ್ಳುವ ವೇಗದ ಬೌಲರ್ ಬುಮ್ರಾ, ಪಾಪಾರಾಜಿಗಳ ಕಾಟ ತಪ್ಪಿಸಲು “ಮೈನೆ ಬುಲಾಯಾ ಹೈ ನಹಿ. ತುಮ್ ಕಿಸಿ ಔರ್ ಕೆ ಲಿಯೇ ಆಯೇ ಹೋ, ಆ ರಹೇ ಹೊಂಗೆ ವೋ” (ನಾನು ನಿಮ್ಮನ್ನು ಬರಲು ಹೇಳಿಲ್ಲ. ನೀವು ಬೇರೆಯವರಿಗಾಗಿ ಬಂದಿದ್ದೀರಿ; ಅವರು ಬರಬಹುದು), ದಯವಿಟ್ಟು ನನ್ನ ಕಾರಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಹೇಳುವ ಮೂಲಕ ಬುಮ್ರಾ ವಿಮಾನ ನಿಲ್ದಾಣದಿಂದ ಹೊರ ನಡೆದಿದ್ದರು.

Leave a Reply

Your email address will not be published. Required fields are marked *

error: Content is protected !!