ಉದಯವಾಹಿನಿ , ಮಸ್ಕತ್: ಪ್ರಧಾನಿ ಮೋದಿ ಓಮನ್‌ಗೆ ಬಂದಿಳಿಯುತ್ತಿದ್ದಂತೆ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಕಿವಿಯಲ್ಲಿ ಆಭರಣ ಕಂಡುಬಂದಿದ್ದು, ಇದು ಹೊಸ ಸ್ಟೈಲಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ಮೂರು ದೇಶಗಳ ಪ್ರವಾಸ ಕೈಗೊಂಡಿದ್ದ ಮೋದಿ ಎರಡು ದಿನಗಳ ಕಾಲ ಓಮನ್‌ಗೆ ಭೇಟಿ ನೀಡಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಓಮಾನ್‌ನ ಉಪಪ್ರಧಾನಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರನ್ನು ಭೇಟಿಯಾದಾಗ ಪ್ರಧಾನಿ ಮೋದಿ ಕಿವಿಯೋಲೆ ರೀತಿಯ ಸಾಧನವನ್ನು ಧರಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಇದು ಮೋದಿಯವರ ಹೊಸ ಸ್ಟೈಲಾ ಎನ್ನುತ್ತಿದ್ದಾರೆ. ಆದರೆ ಇದು ನೈಜ ಸಮಯಕ್ಕೆ ಭಾಷಾಂತರಿಸುವ ಸಾಧನ ಎನ್ನುವುದು ತಿಳಿದುಬಂದಿದೆ.
ಉನ್ನತ ಮಟ್ಟದ ಸಭೆಯಲ್ಲಿ ಸುಗಮ ಸಂವಹನದ ಉದ್ದೇಶದಿಂದ ಈ ಸಾಧನವನ್ನು ಬಳಸಲಾಗುತ್ತದೆ. ಗಲ್ಫ್ ರಾಷ್ಟ್ರವಾದ ಒಮಾನ್‌ನ ಅಧಿಕೃತ ಭಾಷೆ ಅರೇಬಿಕ್. ಈ ಹಿನ್ನೆಲೆ ಭೇಟಿಯ ಸಂದರ್ಭದಲ್ಲಿ ಸುಲಭವಾಗಿ ಮಾತುಕತೆ ನಡೆಸುವುದು ಹಾಗೂ ತಮ್ಮ ಅಭಿಪ್ರಾಯವನ್ನು ಪರಸ್ಪರ ಹಂಚಿಕೊಳ್ಳಲು ಇದು ಪ್ರಮುಖ ಪಾತ್ರವಹಿಸುತ್ತದೆ.
ಮೋದಿ ತಮ್ಮ ಭೇಟಿಯ ಸಂದರ್ಭದಲ್ಲಿ ಕೆಲವು ವ್ಯಾಪಾರ ಒಪ್ಪಂದಗಳಿಗೆ ಸಹಿಹಾಕಿದರು. ಈ ವೇಳೆ ಮೋದಿ ಅವರಿಗೆ ಓಮನ್‌ನ ನಾಗರಿಕ ಗೌರವವಾದ ಆರ್ಡರ್ ಆಫ್ ಓಮನ್ ಅನ್ನು ನೀಡಿ ಗೌರವಿಸಲಾಗಿದೆ. ಭಾರತ ಮತ್ತು ಓಮನ್ ಜನರ ನಡುವಿನ ಪ್ರೀತಿ ಮತ್ತು ವಿಶ್ವಾಸದ ಸಂಕೇತ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ

Leave a Reply

Your email address will not be published. Required fields are marked *

error: Content is protected !!