ಉದಯವಾಹಿನಿ , ಕೊಚ್ಚಿ- ಖ್ಯಾತ ಮಲಯಾಳಂ ನಟ ಕಮ್ ನಿರ್ದೇಶಕ ಶ್ರೀನಿವಾಸನ್ ಇಂದು ಬೆಳಿಗ್ಗೆ ಇಲ್ಲಿಗೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಚಲನಚಿತ್ರೋದ್ಯಮ ಮೂಲಗಳು ತಿಳಿಸಿವೆ.
ಅವರಿಗೆ 69 ವರ್ಷ ವಯಸ್ಸಾಗಿತ್ತು.ತಡರಾತ್ರಿ ಅವರನ್ನು ತ್ರಿಪುನಿತುರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಅವರು ನಿಧನರಾದರು.ಕಣ್ಣೂರು ಮೂಲದ ಶ್ರೀನಿವಾಸನ್ ಕಳೆದ ಹಲವು ವರ್ಷಗಳಿಂದ ಕೊಚ್ಚಿಯಲ್ಲಿ ವಾಸಿಸುತ್ತಿದ್ದರು.ನಟನೆಯ ಜೊತೆಗೆ, ಅವರು ನಿರ್ದೇಶಕ, ಚಿತ್ರಕಥೆಗಾರ, ಡಬ್ಬಿಂಗ್ ಕಲಾವಿದ ಮತ್ತು ನಿರ್ಮಾಪಕರೂ ಆಗಿದ್ದರು.
