ಉದಯವಾಹಿನಿ , ವಿಜಯಪುರ: ಜಿಲ್ಲೆಯಲ್ಲಿ ಪದೇ ಪದೇ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುತ್ತಿದೆ. ಇದೀಗ ಮತ್ತೆ ದಾಳಿ ನಡೆಸಿದ್ದು, ಹಸು ಸಾವನ್ನಪ್ಪಿದೆ. ಆದರೂ ಕೂಡ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ಚಿರತೆ ಮತ್ತೆ ದಾಳಿ ನಡೆಸಿದ್ದು, ಪರಿಣಾಮ ಹಸು ಸಾವನ್ನಪ್ಪಿದೆ. ಇದರಿಂದ ಜನರಲ್ಲಿ ಆತಂಕದ ವಾತವಾರಣ ಸೃಷ್ಠಿಯಾಗಿದೆ. ತದ್ದೇವಾಡಿ, ಮಣಂಕಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗಿವೆ. ಈ ಹಿನ್ನೆಲೆ ತದ್ದೇವಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಿ, ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
