
ಉದಯವಾಹಿನಿ, ಬೀದರ್ : ಬೆಂಗಳೂರಿನಲ್ಲಿ ಇತ್ತೀಚೆಗೆ ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಕಾವ್ಯ ಮತ್ತು ಸಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ರಾಜಕುಮಾರ ಮೇತ್ರೆ ರಕ್ಷಾಳ ಅವರಿಗೆ ಡಾ. ಏ.ಪಿ.ಜೆ ಅಬ್ದುಲ್ ಕಲಾಂ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಔರಾದ್ ತಾಲೂಕಿನ ರಕ್ಷಾಳ ಗ್ರಾಮದ ರಾಜಕುಮಾರ ರಕ್ಷಾಳ ಅವರು ಹಲವಾರು ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜೋತೆಗೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೂಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಲತಾ ಮೂರ್ತಿ, ಯುಸೋಫ ಎಚ್. ಬಿ, ಡಾ. ಜ್ಯೋತಿ ಶ್ರೀನಿವಾಸ್, ಮಹಮ್ಮದ್ ಹುಮಾಯುನ್, ಮಹೇಬೂಬಸಾಹೇಬ್ ವೈ. ಜೆ, ಡಾ. ಎಂ. ಎಂ. ಭಾಷ ನಂದಿ, ಚಂದ್ರಶೇಖರ ಸಿ. ಎನ್, ಖಿದ್ಮಾ ಫೌಂಡೇಶನ್ ಅಧ್ಯಕ್ಷ ಹಾಸಿಂ ಬನ್ನೂರು, ಅಮಿತಾ ಅಶೋಕ ಪ್ರಸಾದ್, ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಆಮಿರ್ ಬನ್ನೂರು, ಅಶ್ವಿನಿ ಎಸ್, ಅಂಗಡಿ ಸೇರಿದಂತೆ ಇತರರು ಇದ್ದರು.
