
ಉದಯವಾಹಿನಿ , ರಷ್ಯಾಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಗುಜರಾತ್ ಮೂಲದ ವಿದ್ಯಾರ್ಥಿಯನ್ನು ಅಲ್ಲಿನ ಸೇನೆಗೆ ಸೇರಲು ಒತ್ತಾಯಿಸಿದ್ದು, ಈ ಸಂಬಂಧ ವಿದ್ಯಾರ್ಥಿ ಉಕ್ರೇನ್‌ನಿಂದ SOS (ತುರ್ತು ಸಂದರ್ಭಗಳಲ್ಲಿ ಮಾಡುವ ಲೈವ್ ವಿಡಿಯೋ ಕರೆ) ವಿಡಿಯೋ ಸಂದೇಶವೊಂದನ್ನ ಕಳಿಸಿದ್ದಾನೆ.
ಗುಜರಾತ್ ಮೂಲದ ವಿದ್ಯಾರ್ಥಿಯನ್ನ ಸಾಹಿಲ್ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಈತ ವಿದ್ಯಾರ್ಥಿ ವೀಸಾದ ಅಡಿ ರಷ್ಯಾಗೆ ತೆರಳಿದ್ದ ಎಂದು ತಿಳಿದುಬಂದಿದೆ.
ಉಕ್ರೇನ್ ಅಧಿಕಾರಿಗಳ ಸಹಾಯದಿಂದ ವಿದ್ಯಾರ್ಥಿ ಈ ಕುರಿತು ವಿಡಿಯೋಯೊಂದು ಹಂಚಿಕೊಂಡಿದ್ದಾನೆ. ನಾನು 2024ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ರಷ್ಯಾಗೆ ತೆರಳಿದ್ದೆ. ಈ ವೇಳೆ ಅಧ್ಯಯನ ಮಾಡುತ್ತಾ, ಕೊರಿಯರ್ ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಉದ್ಯೋಗ ಮಾಡುತ್ತಿದ್ದೆ. ಹಣಕಾಸಿನ ಹಾಗೂ ವೀಸಾ ಸಮಸ್ಯೆಯಿಂದಾಗಿ ನಾನು ಮಾದಕವಸ್ತು ಪ್ರಕರಣದಲ್ಲಿ ಸಿಲುಕಿದ್ದ ಕೆಲವು ರಷ್ಯನ್ನರನ್ನು ಸಂಪರ್ಕಿಸಿದ್ದೆ. ಅದರ ಹೊರತಾಗಿ ನಾನು ಏನ್ನನ್ನೂ ಮಾಡಿರಲಿಲ್ಲ. ಆದರೆ ರಷ್ಯಾ ಪೊಲೀಸರು ನನ್ನನ್ನು ಸುಳ್ಳು ಮಾದಕವಸ್ತು ಪ್ರಕರಣದಲ್ಲಿ ಬ್ಲ್ಯಾಕ್‌ಮೇಲ್ ಮಾಡಿ, ಜೈಲಿಗೆ ಹಾಕಿದರು. ನನ್ನಂತೆ ಕನಿಷ್ಠ 700 ಜನರನ್ನು ಸುಳ್ಳು ಮಾದಕವಸ್ತು ಆರೋಪದ ಮೇಲೆ ಜೈಲಿಗೆ ಹಾಕಿದ್ದಾರೆ. ಜೈಲು ಸೇರಿದ ಬಳಿಕ ಅಲ್ಲಿನ ಅಧಿಕಾರಿಗಳು ರಷ್ಯಾ ಸೇನೆಗೆ ಸೇರಿದರೆ ಈ ಪ್ರಕರಣದಿಂದ ಕೈಬಿಡಲಾಗುವುದು ಎಂದು ಭರವಸೆ ನೀಡಿದ್ದರು ಎಂದು ಆರೋಪಿಸಿದ್ದಾನೆ.
ಈ ವೇಳೆ ರಷ್ಯಾ ಪೊಲೀಸರ ಒತ್ತಡಕ್ಕೆ ಮಣಿದು, 15 ದಿನಗಳ ಕಾಲ ತರಬೇತಿ ಪಡೆದುಕೊಂಡೆ. ಬಳಿಕ ನನ್ನನ್ನು ಯುದ್ಧಕ್ಕೆ ಕಳುಹಿಸಿದರು. ಆಗ ನಾನು ಉಕ್ರೇನ್ ಸೈನಕ್ಕೆ ಶರಣಾದೆ. ಆನಂತರ ಉಕ್ರೇನ್ ಪಡೆ ಈ ವಿಡಿಯೋವನ್ನು ನನ್ನ ಕುಟುಂಬಸ್ಥರಿಗೆ ಕಳಿಸುವಲ್ಲಿ ಸಹಾಯಮಾಡಿದರು. ರಷ್ಯಾಕ್ಕೆ ಬರುವ ಯುವಕರಿಗೆ ನನ್ನದೊಂದು ಸಂದೇಶ.. `ಜಾಗರೂಕರಾಗಿರಿ’ ಮಾದಕವಸ್ತು ಪ್ರಕರಣದಲ್ಲಿ ನಿಮ್ಮನ್ನು ತಪ್ಪಾಗಿ ಸಿಲುಕಿಸುವ ಅನೇಕ ವಂಚಕರು ಇಲ್ಲಿದ್ದಾರೆ. ಇಲ್ಲಿ ಭಾರತೀಯರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದಾನೆ.
ಗೆ ನನ್ನನ್ನು ತಾಲ್ನಾಡಿಗೆ ಮರಳುವಂತೆ ಭಾರತ ಸರ್ಕಾರ ಸಹಾಯ ಮಾಡಬೇಕು. ಇತ್ತೀಚೆಗೆ ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಭಾರತಕ್ಕೆ ಬಂದಿದ್ದರು. ಅವರೊಂದಿಗೆ ಮಾತನಾಡಿ, ನನ್ನನ್ನು ಸುರಕ್ಷಿತವಾಗಿ ಮನೆಗೆ ಕಳಿಸಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾನೆ.
