ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ `ಕಾಲ್ ಆಫ್ ಡ್ಯೂಟಿ’ ವಿಡಿಯೋ ಗೇಮ್ ತಯಾರಿಸಿದ್ದ ಖ್ಯಾತ ಗೇಮ್ ತಯಾರಕ ವಿನ್ಸ್ ಜಾಂಪೆಲ್ಲಾ ನಿಧನರಾಗಿದ್ದಾರೆ. ಕಾಲ್ ಆಫ್ ಡ್ಯೂಟಿ’ ಎಂಬ ಮಿಲಿಟರಿ ಗೇಮ್ ತಯಾರಿಸುವ ಮೂಲಕ ಭಾರೀ ಖ್ಯಾತಿ ಗಳಿಸಿದ್ದ ಜಾಂಪೆಲ್ಲಾ ಅವರು ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಲಾಸ್ ಏಂಜಲೀಸ್‌ನ ಉತ್ತರದ ಸ್ಯಾನ್ ಗೇಬ್ರಿಯಲ್ ಪರ್ವತಗಳಲ್ಲಿನ ಅತೀ ಹೆಚ್ಚು ತಿರುವು ರಸ್ತೆಯಾದ ಏಂಜಲೀಸ್ ಕ್ರೆಸ್ಟ್ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ತಮ್ಮ ದುಬಾರಿ ಫೆರಾರಿ ಕಾರಿನಲ್ಲಿ ಚಲಿಸುತ್ತಿರುವಾಗ ನಿಯಂತ್ರಣ ತಪ್ಪಿದ್ದು, ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದ್ದಾರೆ.
