ಉದಯವಾಹಿನಿ, ಎರಡು ವರ್ಷಗಳ ಕಾಲ ಹೋಟೆಲ್ ರೂಮಿನಲ್ಲಿದ್ದ ಗೇಮರ್ ಹೋಗುವಾಗ ಮೂರು ಅಡಿಯಷ್ಟು ಕಸ ತುಂಬಿ ಹೋಗಿರುವ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ವ್ಯಕ್ತಿಯೊಬ್ಬ ಎರಡು ವರ್ಷಗಳಿಂದ ರೂಮ್‌ನ್ನೇ ತನ್ನ ಮನೆಯಾಗಿಸಿಕೊಂಡಿದ್ದು, ಹೊರಡುವಾಗ ಬಿಲ್ ಸೆಟಲ್ ಮಾಡಿದ್ದಾನೆ. ತದನಂತರ ಕ್ಲೀನಿಂಗ್‌ಗೆಂದು ರೂಮಿಗೆ ಸಿಬ್ಬಂದಿ ಎಂಟ್ರಿ ಕೊಟ್ಟಾಗ ಶಾಕ್ ಆಗಿದ್ದಾರೆ. ಕಸದ ರಾಶಿಯನ್ನು ಕಂಡು ಹೌಹಾರಿದ್ದಾರೆ.
ಹೋಟೆಲ್‌ನ ಶೋಚನೀಯ ಸ್ಥಿತಿಯ ವೀಡಿಯೊ ಎಕ್ಸ್‌ನಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಅತಿಥಿಯು ಆನ್‌ಲೈನ್ ಗೇಮರ್ ಆಗಿದ್ದು, ಎರಡು ವರ್ಷಗಳ ಕಾಲ ಚಾಂಗ್‌ಚುನ್‌ನಲ್ಲಿರುವ ಹೋಟೆಲ್‌ನಲ್ಲಿ ಇದ್ದರು. ಹೌಸ್‌ಕೀಪಿಂಗ್ ಸಿಬ್ಬಂದಿಯ ಪ್ರಕಾರ, ಅವರು ಕೋಣೆಯಿಂದ ಹೊರಬರುತ್ತಲೇ ಇರಲಿಲ್ಲ.
ಕೋಣೆಯ ಬಹುತೇಕ ಮೂಲೆಗಳಲ್ಲಿ ಅಸಂಖ್ಯಾತ ಕೊಳಕು ಮತ್ತು ಪುಡಿಪುಡಿಯಾದ ಆಹಾರಗಳು, ಖಾಲಿ ಬಾಟಲಿಗಳು, ಡಬ್ಬಿಗಳು, ಟೇಕ್ಅವೇ ಆಹಾರದ ಪೊಟ್ಟಣಗಳು ಹೀಗೆ ಹತ್ತು ಹಲವಾರು ತ್ಯಾಜ್ಯಗಳ ರಾಶಿ ಇಡೀ ರೂಮೊಳಗೆ ತುಂಬಿತ್ತು. ಶೌಚಾಲಯ ಕೂಡ ಅಷ್ಟೇ ಭಯಾನಕವಾಗಿತ್ತು. ಎಲ್ಲೆಂದರಲ್ಲಿ ಬಿದ್ದ ಟಾಯ್ಲೆಟ್ ಪೇಪರ್ಗಳು, ಕೊಳಕು ಕಮೋಡ್ ಹೀಗೆ ಒಮ್ಮೆ ನೋಡಿದರೆ ವಾಕರಿಕೆ ಬರುವಂತಿತ್ತು ಎಂದು ಹೋಟೆಲ್ ಸಿಬ್ಬಂದಿ ಹೇಳಿಕೊಂಡಿದ್ದಾರೆ.
