ಉದಯವಾಹಿನಿ, ಮೆಕ್ಸಿಕೋ ಸಿಟಿ : ಸಾಮಾನ್ಯವಾಗಿ ದೂರದ ಗಮ್ಯ ತಲುಪಲು ಪ್ರಯಾಣಿಕರು ರೈಲನ್ನು ಅವಲಂಬಿಸುತ್ತಾರೆ. ಯಾಕಂದರೆ ಸುಖ ಪ್ರಯಾಣದ ಜತೆಗೆ ಸರಿಯಾದ ಸಮಯಕ್ಕೂ ತಲುಪುತ್ತದೆ ಎನ್ನುವುದು ಇದಕ್ಕೆ ಕಾರಣ. ಆದರೆ ಇಂತಹ ಸಾರ್ವಜನಿಕ ಸಾರಿಗೆಯಲ್ಲಿ ಸಮಯ ಪಾಲನೆ ಎನ್ನುವುದು ದಿನ ನಿತ್ಯ ಪ್ರಯಾಣ ಮಾಡುವವರಿಗೆ ಮಾತ್ರವಲ್ಲ ಜನಪ್ರತಿನಿಧಿ, ರಾಜಕೀಯದವರಿಗೂ ಅನ್ವಯವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಂತಿದೆ. ಸಾಮಾನ್ಯವಾಗಿ ಯಾರೇ ಅಧಿಕಾರಿ, ರಾಜಕೀಯದವರು ಬರುತ್ತಾರೆ ಅಂದಾಗ ಬಸ್, ರೈಲು, ವಿಮಾನ ಕಾದು ನಿಲ್ಲುವುದು ಇದೆ. ಆದರೆ ಮೆಕ್ಸಿಕೋದಲ್ಲಿ ನಡೆದ ಈ ಘಟನೆ ಜನರನ್ನೇ ಶಾಕ್‌ಗೊಳಿಸುವಂತೆ ಮಾಡಿದೆ. ಹೌದು ರೈಲ್ವೇ ಉದ್ಘಾಟನಾ ಸಮಾರಂಭಕ್ಕೆ ತಡವಾಗಿ ಬಂದ ಮೇಯರ್ ಅನ್ನು ಅಲ್ಲೇ ಬಿಟ್ಟು ರೈಲು ಸಮಯಕ್ಕೆ ಸರಿಯಾಗಿ ಹೊರಟ ವಿಡಿಯೊವೊಂದು ವೈರಲ್ ಆಗಿದೆ.
ಡಿಸೆಂಬರ್ 15ರಂದು ಮೆಕ್ಸಿಕೋದ ಜಲಿಸ್ಕೊದ ಟ್ಲಾಜೊ ಮುಲ್ಕೊ ಡಿ ಜುನಿಗಾದಲ್ಲಿ ಹೊಸ ಲಘು ರೈಲು ಸೇವೆಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ಇತ್ತು. ಪ್ಲಾಟ್‌ಫಾರ್ಮ್‌ಗೆ ಅಧಿಕಾರಿಗಳು, ಗಣ್ಯರು, ಮಾಧ್ಯಮ ಸಿಬ್ಬಂದಿ, ಆಹ್ವಾನಿತ ಅತಿಥಿಗಳು ಆಗಮಿಸಿದ್ದರು. ಈ ಸಂಭ್ರಮದ ಕ್ಷಣದಲ್ಲಿ ಸಾಕ್ಷಿಯಾಗಲು ರಾಜ್ಯದ ಗವರ್ನರ್ ಸೇರಿದಂತೆ ಹಲವು ಅತಿಥಿಗಳು ರೈಲಿನ ಒಳಗಿದ್ದರು. ರೈಲು ಹೊರಡುವ ಸಮಯವಾದ ಕಾರಣ ಸ್ವಯಂಚಾಲಿತ ಬಾಗಿಲು ಮುಚ್ಚಿ ಇನ್ನೇನು ರೈಲು ಹೊರಡಲು ಸಿದ್ದವಾಗಿತ್ತು.
