ಉದಯವಾಹಿನಿ, ರೋಮ್: ಸದ್ಭಾವನೆಯ ಎಲ್ಲಾ ಜನರು ಕ್ರಿಸ್‌ಮಸ್ ಹಬ್ಬದಂದು ಶಾಂತಿಯ ದಿನವಾಗಿ ಗೌರವಿಸಿ ಜಾಗತಿಕ ಒಪ್ಪಂದ ನಡೆಸುವಂತೆ 14ನೇ ಪೋಪ್ ಲಿಯೋ ಕರೆ ನೀಡಿದ್ದಾರೆ. ಕನಿಷ್ಠ ಕ್ರಿಸ್ತನ ಜನ್ಮದಿನವಾದರೂ ಎಲ್ಲಾ ಜನರು ಶಾಂತಿ ದಿನವನ್ನಾಗಿ ಗೌರವಿಸಬೇಕು ಎಂದು ಅವರು ಹೇಳಿದರು. ರೋಮ್  ಬಳಿಯ ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಸ್‌ಮಸ್ ದಿನದಂದು ಶಾಂತಿಗಾಗಿ ಜಾಗತಿಕ ಒಪ್ಪಂದ ನಡೆಸಬೇಕು. ಆದರೆ ರಷ್ಯಾ ಈ ವಿನಂತಿಯನ್ನು ತಿರಸ್ಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸದ್ಭಾವನೆ ಹೊಂದಿರುವ ಎಲ್ಲಾ ಜನರು ಕನಿಷ್ಠ ನಮ್ಮ ರಕ್ಷಕನ ಜನ್ಮ ದಿನದಂದು ಶಾಂತಿಯ ದಿನವನ್ನಾಗಿ ಆಚರಿಸಬೇಕು ಎಂದು ನಾನು ವಿನಂತಿ ಮಾಡುತ್ತೇನೆ. 2022ರ ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಕದನ ವಿರಾಮಕ್ಕಾಗಿ ನೀಡಿರುವ ಕರೆಗಳನ್ನು ಅದು ಪದೇ ಪದೇ ತಿರಸ್ಕರಿಸಿದೆ. ಇದು ನನಗೆ ಬಹಳ ದುಃಖವನ್ನು ಉಂಟು ಮಾಡಿದೆ. ರಷ್ಯಾವು ಶಾಂತಿ ಒಪ್ಪಂದದ ವಿನಂತಿಯನ್ನು ತಿರಸ್ಕರಿಸಿದೆ. ಆದರೆ ಕ್ರಿಸ್‌ಮಸ್ ಹಬ್ಬದಂದು ಇಡೀ ಜಗತ್ತಿನಲ್ಲಿ 24 ಗಂಟೆಗಳ ಕಾಲ ಶಾಂತಿ ನೆಲೆಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದ ಅವರು ತಿಳಿಸಿದ್ದಾರೆ. ಉಕ್ರೇನ್ ಮೇಲೆ ಮಾಸ್ಕೋದ ನಿರಂತರ ದಾಳಿಗಳಿಂದ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಚಳಿಗಾಲದ ಹಿಮಪಾತದಿಂದ ಸಾವಿರಾರು ಜನರಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹೀಗಾಗಿ ಉಕ್ರೇನ್ ಮಂಗಳವಾರ ದೇಶದ ಪೂರ್ವದಲ್ಲಿರುವ ಪಟ್ಟಣದಿಂದ ಸೈನ್ಯವನ್ನು ಹಿಂತೆಗೆದುಕೊಂಡಿತು. ಈ ನಡುವೆ ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮತ್ತು ಉಕ್ರೇನ್ ನ ಉನ್ನತ ಸಮಾಲೋಚಕರು ಮಿಯಾಮಿಯಲ್ಲಿ ಯುಎಸ್ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರೂ ಯಾವುದೇ ಪ್ರಗತಿ ಕಂಡಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!